ದೇಶ

ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರಿಂದ ಅತ್ಯಾಚಾರ ಅಸ್ತ್ರದ ಬಳಕೆ: ಸಿಎಂ ಖಟ್ಟರ್ ಹೊಸ ವಿವಾದ

ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತ ಸಂಬಂಧಗಳೇ ಆಗಿದ್ದು, ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರು ಅತ್ಯಾಚಾರ ಅಸ್ತ್ರದ ಬಳಕೆ ಮಾಡುತ್ತಿದ್ದಾರೆ ಎಂದುಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರಿಂದ ಅತ್ಯಾಚಾರ ಅಸ್ತ್ರದ ಬಳಕೆ: ಸಿಎಂ ಖಟ್ಟರ್ ಹೊಸ ವಿವಾದ
ಸಂಗ್ರಹ ಚಿತ್ರ
Published On :
ಚಂಡೀಘಡ: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತ ಸಂಬಂಧಗಳೇ ಆಗಿದ್ದು, ಬಾಯ್ ಫ್ರೆಂಡ್ ವಾಪಸ್ ಪಡೆಯಲು ಮಹಿಳೆಯರು ಅತ್ಯಾಚಾರ ಅಸ್ತ್ರದ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಖಟ್ಟರ್, 'ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಬಹುತೇಕ ಸುಳ್ಳು ಪ್ರಕರಣಗಳಾಗಿದ್ದು, ಮಹಿಳೆಯರು ತಮ್ಮ ಪರಿಚಿತ ವ್ಯಕ್ತಿಗಳೊಂದಿಗೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಅತ್ಯಾಚಾರ ಅಸ್ತ್ರವನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.
'ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದೆ. ಆದರೆ, ಈ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳಲ್ಲಿ ದೌರ್ಜನ್ಯ ನಡೆದಿರುವುದಿಲ್ಲ. ಅವುಗಳಲ್ಲಿ ಅನೇಕವು ಸುಳ್ಳು ಪ್ರಕರಣಗಳಾಗಿರುತ್ತವೆ. ಉದ್ದೇಶ ಪೂರ್ವಕವಾಗಿ ಮಹಿಳೆಯರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ  ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹುತೇಕ ಒಪ್ಪಿತ ಸಂಬಂಧಗಳೆ ಆಗಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಮಹಿಳೆಯರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ಧಾರೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿಲ್ಲ. ಆದರೆ ತಮ್ಮ ಸಂಗಾತಿಯನ್ನು ವಾಪಸ್ ಪಡೆಯಲು ಅಥವಾ ಆತನೊಂದಿಗೆ ಜಗಳವಾದಗ ಮಹಿಳೆಯರು ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡ 80ರಿಂದ90ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ ಮತ್ತು ಆರೋಪಿ ಪರಸ್ಪರ ಪರಿಚಿತರಾಗಿರುತ್ತಾರೆ. ಅವರ ನಡುವಿನ ಸಂಬಂಧ ಏನಾದರೂ ಅಡಚಣೆ ಉಂಟಾದಲ್ಲಿ ಈ ರೀತಿ ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ. ಇದು ಎಫ್​ಐಆರ್​ ಪ್ರಕರಣಗಳಲ್ಲಿ ಬಯಲು ಕೂಡ ಆಗಿದೆ ಎಂದು ಖಟ್ಟರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.