ರಿಮೋಟ್ ಕಂಟ್ರೋಲ್ ಸರ್ಕಾರ ನಡೆಸುತ್ತಿದ್ದ 'ಯುಪಿಎ' ಎಂದಿಗೂ ಛತ್ತೀಸ್ಗಢದತ್ತ ಗಮನ ಹರಿಸಲಿಲ್ಲ: ಪ್ರಧಾನಿ ಮೋದಿ
ಸರ್ಕಾರವನ್ನು ತನ್ನ ರಿಮೋಟ್ ಕಂಟೋಲ್ ಮಾಡಿಕೊಂಡಿದ್ದ ಕಾಂಗ್ರೆಸ್ ಎಂದಿಗೂ ಛತ್ತೀಸ್ಗಡದತ್ತ ಗಮನ ಹರಿಸಲೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ವಾಗ್ದಾಳಿ...

Published On :
ರಾಯ್ಪುರ: ಸರ್ಕಾರವನ್ನು ತನ್ನ ರಿಮೋಟ್ ಕಂಟೋಲ್ ಮಾಡಿಕೊಂಡಿದ್ದ ಕಾಂಗ್ರೆಸ್ ಎಂದಿಗೂ ಛತ್ತೀಸ್ಗಡದತ್ತ ಗಮನ ಹರಿಸಲೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್ಗಢ ಚುನಾವಣೆ ಹಿನ್ನಲೆಯಲ್ಲಿ ಮಹಾಸಮುಂದ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಿಮೋಟ್ ಕಂಟ್ರೋಲ್ ನಂತಿದ್ದ ಯುಪಿಎ ಸರ್ಕಾರ ಎಂದಿಗೂ ಛತ್ತೀಸ್ಗಢದ ಆಗ್ರಹಗಳತ್ತ ಗಮನ ಹರಿಸಿರಲಿಲ್ಲ. ನಕ್ಸಲರ ವಿರುದ್ಧ ಹೋರಾಟ ನಡೆಸಲು ರಮಣ್ ಸಿಂಗ್ ಅವರು ಸಹಾಯ ಕೇಳಿದ್ದರು. ರಿಮೋಟ್ ಕಂಟ್ರೋಲ್ ಸರ್ಕಾರದ ಬಳಿ ಹೆಚ್ಚಿನ ಸೇನಾಬಲ ಬೇಕೆಂದು ಹೇಳಿದ್ದರು. ಆದರೆ, ಅದನ್ನು ಅಂದಿನ ಸರ್ಕಾರ ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ರಮಣ್ ಸಿಂಗ್ ಅವರನ್ನು ಪ್ರಶಂಸಿಸಿರುವ ಮೋದಿಯವರು, ಹಿಂದಿನ ಕೇಂದ್ರ ಸರ್ಕಾರದಿಂದ ಸಹಾಯವನ್ನು ಪಡೆಯದೆಯೇ ರಾಜ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ. ಛತ್ತೀಸ್ಗಢ ಕೂಡ ಭಾರತದ ಒಂದು ಭಾಗವೆಂದು ಕಾಂಗ್ರೆಸ್ ತಿಳಿದಿರಲಿಲ್ಲ. ಸಾಕಷ್ಟು ಋಣಾತ್ಮಕ ವಾತಾವರಣವಿದ್ದರೂ ರಮಣ್ ಸಿಂಗ್ ಅವರು ರಾಜ್ಯ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಲ್ಕು ತಲೆಮಾರುಗಳು ದೇಶದಲ್ಲಿ ಆಡಳಿತ ನಡೆಸಿದೆ. ಜನರ ಭವಿಷ್ಯವೇನಾಯಿತು? ಕೇವಲ ಒಂದು ಕುಟುಂಬದ ಬಗ್ಗೆಯಷ್ಟೇ ಚಿಂತಿಸಿದ್ದರು. ಆದರೆ, ಜನರ ಕಲ್ಯಾಣ ಕುರಿತಂತೆ ಎಂದಿಗೂ ಆಲೋಚಿಸಿರಲಿಲ್ಲ. ಇಂತಹವರು ಜನರ ಆಶಾಭಾವನೆಗಳನ್ನು ಪೂರ್ಣಗೊಳಿಸುತ್ತಾರೆಂದು ಹೇಗೆ ನಂಬುವುದು? ಎಂದು ಪ್ರಶ್ನಿಸಿದ್ದಾರೆ.
ಗಾಂಧಿ ಕುಟುಂಬದಿಂದ ಬಾರದ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿ. ತನ್ನ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯ, ಅಧ್ಯಕ್ಷ ಸ್ಥಾನಕ್ಕೆ ಸರಿ ಹೊಂದುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಈ ಮೂಲಕ ಸವಾಲು ಹಾಕುತ್ತೇನೆಂದಿದ್ದಾರೆ.
ಬಳಿಕ ಛತ್ತೀಸ್ಗಢ ರಾಜ್ಯ ಕುರಿತಂತೆ ಮಾತನಾಡಿದ ಅವರು, ಛತ್ತೀಸ್ಗಢ ರಾಜ್ಯಕ್ಕೆ ಇದೀಗ 18 ವರ್ಷಗಳಾಗಿವೆ. ರಾಜ್ಯ ಸಾಕಷ್ಟು ಹೊಸ ಗುರಿಗಳನ್ನು ಹೊಂದಿದೆ. ರಾಜ್ಯಕ್ಕಿದು ಅತ್ಯಂತ ಕಠಿಣ ಸಮಯವಾಗಿದೆ. ಮಕ್ಕಳಿಗೆ 18 ವರ್ಷಗಳಾದಾಗ ಪೋಷಕರು ಅವರ ಭವಿಷ್ಯದ ಬಗ್ಗೆ ಹೇಗೆ ಚಿಂತಿಸುತ್ತಾರೋ ಹಾಗೆ ಇಂದು ಛತ್ತೀಸ್ಗಢದ ಸ್ಥಿತಿ ಕೂಡ ಇದೆ. ರಾಜ್ಯದ ಕಲ್ಯಾಣದ ಬಗ್ಗೆ ಚಿಂತನೆ ನಡೆಸುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈಗಾಗಲೇ ಒಂದು ಬಾರಿ ಅವಕಾಶ ನೀಡಿದ್ದೀರಿ. ಮತ್ತೊಮ್ಮೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


