ಸೋನಿಯಾ ದಾರಿ ಸುಗಮಕ್ಕಾಗಿ ದಲಿತ ನಾಯಕ ಸೀತಾರಾಮ್ ಕೇಸರಿ ಬಲಿ - ಪ್ರಧಾನಿ ಮೋದಿ
ಸೋನಿಯಾಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಸಲುವಾಗಿ ದಲಿತ ನಾಯಕ ಸೀತಾರಾಮ್ ಕೇಸರಿ ಅಧಿಕಾರ ಪೂರ್ಣಗೊಳಿಸುವ ಮುನ್ನಾವೇ ಅವರನ್ನು ಪಕ್ಷದಿಂದ ಹೊರಗೆ ದಬ್ಬಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ

ಛತ್ತೀಸ್ ಗಢ : ಸೋನಿಯಾಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಸಲುವಾಗಿ ದಲಿತ ನಾಯಕ ಸೀತಾರಾಮ್ ಕೇಸರಿ ಅಧಿಕಾರ ಪೂರ್ಣಗೊಳಿಸುವ ಮುನ್ನಾವೇ ಅವರನ್ನು ಪಕ್ಷದಿಂದ ಹೊರಗೆ ದಬ್ಬಲಾಯಿತು ಎಂದು ಕಾಂಗ್ರೆಸ್ ಹಾಗೂ ನೆಹರು-ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್ ಗಢ ವಿಧಾನಸಭೆಯ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ಪ್ರಚಾರದ ಕಡೆಯೇ ದಿನವಾದ ಇಂದು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಒಂದೇ ಕುಟುಂಬದ ನಾಲ್ಕು ತಲೆಮಾರಿನವರು ದೇಶವನ್ನು ಆಳಿದ್ದಾರೆ. ಅಧಿಕಾರದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ, ಅವರ ಆಡಳಿತದಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದಲಿತ ನಾಯಕ ಸೀತಾರಾಮ್ ಕೇಸರಿ ಐದು ವರ್ಷ ಪೂರ್ಣಗಳೊಳಿಸಲು ಕಾಂಗ್ರೆಸ್ ಬಿಡಲಿಲ್ಲ. ಇದನ್ನು ದೇಶ ನೋಡಿದೆ. ಸೋನಿಯಾಗಾಂಧಿ ಹಾದಿ ಸುಗಮಗೊಳಿಸಲು ಅವರನ್ನು ಕಚೇರಿಯಿಂದ ಹೊರ ಹಾಕಿ ಬೀದಿಗೆ ತಳ್ಳಲಾಯಿತು ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾಗಲು ಯೋಗ್ಯತೆ ಇರುವ ಗಾಂಧಿ ಕುಟುಂಬಕ್ಕೆ ಸೇರದೆ ಇರುವ ಯಾವುದೇ ನಾಯಕನನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಿ ಎಂದು ನರೇಂದ್ರ ಮೋದಿ ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


