ಆರ್ ಬಿಐ ಮೀಸಲು ಹಣದ ಮೇಲೆ ಕೇಂದ್ರ ಸರ್ಕಾರದ ಕಣ್ಣು- ಚಿದಂಬರಂ
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿರುವ 9 ಲಕ್ಷ ಕೋಟಿ ರೂಪಾಯಿ ಮೀಸಲು ಹಣದ ಮೇಲೆ ಕೇಂದ್ರಸರ್ಕಾರ ಕಣ್ಣಿಟ್ಟಿದ್ದು, ಆರ್ ಬಿಐಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿರುವ 9 ಲಕ್ಷ ಕೋಟಿ ರೂಪಾಯಿ ಮೀಸಲು ಹಣದ ಮೇಲೆ ಕೇಂದ್ರಸರ್ಕಾರ ಕಣ್ಣಿಟ್ಟಿದ್ದು, ಆರ್ ಬಿಐಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.
ಆರ್ ಬಿಐ ಆಡಳಿತ ಮಂಡಳಿ ಸಭೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವರೂ ಆದ ಚಿದಂಬರಂ, ಸೋಮವಾರ ನಡೆಯಲಿರುವ ಸಭೆಯಲ್ಲಿ ಆರ್ ಬಿಐ ಮತ್ತು ಕೇಂದ್ರಸರ್ಕಾರ ಪರಸ್ಪರ ಹೊಡೆದಾಡಿಕೊಳ್ಳಲಿವೆ ಎಂದು ಹೇಳಿದ್ದಾರೆ.
ಆರ್ ಬಿಐ ಸಭೆಯು ಕೇಂದ್ರ ಬ್ಯಾಂಕಿನ ಸ್ವಾಯತ್ತತೆ ಹಾಗೂ ಭಾರತದ ಆರ್ಥಿಕತೆ ನಡುವಣ ಲೆಕ್ಕ ಪರಿಶೋಧನೆ ಮಾಡುವ ದಿನವಾಗಿದೆ. ಇನ್ನು ಮುಂದೆ ಜಗತ್ತಿನಲ್ಲಿ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ನಿರ್ವಹಿಸುವ ಕಂಪನಿಯಾಗಲಿದೆ. ಖಾಸಗಿ ಉದ್ಯಮಿಗಳು, ಆರ್ ಬಿಐ ಗೌರ್ನರ್ ಗೆ ನೀಡುವ ಸಲಹೆ ಸೂಚನೆ ನಿರ್ದೇಶನಗಳಂತೆ ನಡೆಯುವ ಸಂಸ್ಥೆಯಾಗಿ ಪರಿವರ್ತನೆಯಾಗಲಿದೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.
9.53 ಲಕ್ಷ ಕೋಟಿ ರೂ.ಗಳಷ್ಟು ಮೀಸಲು ಹಣವನ್ನು ಆರ್ ಬಿಐ ಹೊಂದಿದೆ. ಈಗ ಬರುತ್ತಿರುವ ವರದಿಗಳನ್ನೇ ನಂಬುವುದಾದರೆ, ನಿಯಮಾವಳಿಗಳನ್ನು ಸಡಿಲಿಸುವ ಮೂಲಕ ಮೀಸಲು ಹಣದ ಪ್ರಮಾಣ ಕ್ಷೀಣಿಸುವಂತೆ ಮಾಡಿದರೆ ಕೇಂದ್ರ ಬ್ಯಾಂಕ್ ದುರ್ಬಲವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ ಬಿಐನ 3.6 ಲಕ್ಷ ಕೋಟಿ ರೂ. ಮೀಸಲು ಹಣವನ್ನು ಕೇಂದ್ರಕ್ಕೆ ನೀಡಬೇಕೆಂಬ ಯಾವುದೇ ಪ್ರಸ್ತಾವನೆ ಇಲ್ಲ. ಅದೆಲ್ಲ ಕೇವಲ ಊಹಾಪೋಹವಷ್ಟೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಈಗಾಗಲೇ ಸ್ಪಷ್ಪಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


