ದೇಶ

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮತ್ತೋರ್ವ ನಾಗರಿಕನ ಅಪಹರಣ, ಹತ್ಯೆ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಇಬ್ಬರು ನಾಗರಿಕರನ್ನು ಅಪಹರಣ ಮಾಡಿ ಹತ್ಯೆಗೈದಿದ್ದಾರೆ.

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮತ್ತೋರ್ವ ನಾಗರಿಕನ ಅಪಹರಣ, ಹತ್ಯೆ
ಮೃತ ಹುಜೈಫ್ ಅಶ್ರಫ್
Published On :
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಇಬ್ಬರು ನಾಗರಿಕರನ್ನು ಅಪಹರಣ ಮಾಡಿ ಹತ್ಯೆಗೈದಿದ್ದಾರೆ.
ನಿನ್ನೆಯಷ್ಟೇ ಪುಲ್ವಾಮದಲ್ಲಿ ಓರ್ವನ ಅಪಹರಣ ಮಾಡಿ ಹತ್ಯೆಗೈದಿದ್ದ ಉಗ್ರರಿಂದ ಮತ್ತೊಮ್ಮೆ ಅಂತಹುದೇ ಕೃತ್ಯ ನಡೆದಿದ್ದು, ಇಂದು ಶೋಪಿಯಾನ್ ನಲ್ಲಿ ಕೇವಲ 19 ವರ್ಷದ ಯುವಕನನ್ನು ಅಪಹರಿಸಿ ಕತ್ತು ಸೀಳಿ ಕೊಂದು ಹಾಕಿದ್ದಾರೆ.
ಮೂಲಗಳ ಪ್ರಕಾರ ಈ ಇಬ್ಬರೂ ಸೇನೆಗೆ ಉಗ್ರರ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂಬ ಶಂಕೆಯ ಮೇರೆಗೆ ಉಗ್ರರು ಇವರನ್ನುಕೊಂದು ಹಾಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸೇನೆಗೆ ನೆರವು ನೀಡುವ ಅಥವಾ ಸೇನೆಗೆ ಮಾಹಿತಿ ನೀಡುವ ಎಲ್ಲರನ್ನೂ ಕೊಂದು ಹಾಕುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಮೃತನನ್ನು 19 ವರ್ಷದ ಹುಜೈಫ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಕುಲಗಾಮ್ ನ ಮಂಜಗಾಮ್ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ಪುಲ್ವಾಮ ಜಿಲ್ಲೆಯ ಸೈದಾಪೋರಾದಲ್ಲಿ ನದೀಮ್ ಮಂಜೂರ್ ಎಂಬಾತನನ್ನು ಆತನ ಮನೆಯಿಂದಲೇ ಅಪಹರಣ ಮಾಡಿದ್ದ ಉಗ್ರರು ಆತನನ್ನು ಭೀಕರವಾಗಿ ಕೊಂದು ಹಾಕಿದ್ದರು.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.