ಭಾರತದಲ್ಲಿ ಇದೇ ಮೊದಲು: ಮಥುರಾದಲ್ಲಿ ಆನೆಗಳ ವಿಶೇಷ ಆಸ್ಪತ್ರೆ ನಿರ್ಮಾಣ
ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಯೊಂದು ಮಥುರಾದಲ್ಲಿ ಆರಂಭವಾಗಿದೆ...

Published On :
ಮಥುರಾ: ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಯೊಂದು ಮಥುರಾದಲ್ಲಿ ಆರಂಭವಾಗಿದೆ.
ಉತ್ತರಪ್ರದೇಶದ ಆಗ್ರಾದ ಫರಾಹ್ ಬ್ಲಾಕ್'ನ ಚುರ್ಮುರಾ ಗ್ರಾಮದಲ್ಲಿ ಆಗ್ರಾ ವಿಭಾಗೀಯ ಆಯುಕ್ತ ಅನಿಲ್ ಕುಮಾರ್ ಅವರು ಆಸ್ಪತ್ರೆ ಉದ್ಘಾಟಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈಯರ್ಲೆಸ್ ಡಿಜಿಟಲ್ ಎಕ್ಸ್-ರೇ, ಲೇಸರ್ ಚಿಕಿತ್ಸೆ, ದಂತ ಎಕ್ಸ್-ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸಾನೋಗ್ರಾಫಿ, ಹೈಡ್ರೋಥೆರಪಿ ಮತ್ತು ನಿದ್ರಾಹೀನತೆ ದೂರ ಮಾಡುವ ಚಿಕಿತ್ಸೆ ಸೇರಿ ಹಲವು ಚಿಕಿತ್ಸಾ ವ್ಯವಸ್ಥೆಗಳು ಲಭ್ಯವಿದೆ.
ಆಸ್ಪತ್ರೆಯನ್ನು ಆನೆ ಸಂರಕ್ಷಣಾ ಹಾಗೂ ಕಾಳಜಿ ಕೇಂದ್ರದ ಸಮೀಪವೇ ನಿರ್ಮಿಸಲಾಗಿದ್ದು, ಗಾಯಗೊಂಡ, ಅನಾರೋಗ್ಯ ಪೀಡಿತ ಆನೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ತರಬೇತಿ ಸಂದರ್ಭದಲ್ಲಿ ಅವುಗಳನ್ನು ಮೇಲೆತ್ತುವ ವೈದ್ಯಕೀಯ ಸೌಲಭ್ಯಗಳನ್ನು ಆಸ್ಪತ್ರೆ ಒಳಗೊಂಡಿದೆ.
ಪಶುವೈದ್ಯರು ಹಾಗೂ ಪಶು ವೈದ್ಯ ವಿದ್ಯಾರ್ಥಿಗಳು, ತರಬೇತುದಾರರು ಸುರಕ್ಷಿತ ಅಂತರದಿಂದ ಆನೆಗಳ ವರ್ತನೆಯನ್ನು ಗಮನಿಸಿ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಇಲ್ಲಿ ಮಾಡಿಕೊಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


