ದೇಶ

ಪಂಜಾಬ್ ಪೊಲೀಸರಿಂದ ಉಗ್ರ ಜಾಕೀರ್ ಮೂಸಾ ವಾಂಟೆಡ್ ಪೋಸ್ಟರ್ ಬಿಡುಗಡೆ

ಪಂಜಾಬ್ ಪೊಲೀಸರು, ಜಮ್ಮು ಮತ್ತು ಕಾಶ್ಮೀರದ ಅನ್ಸರ್​ ಘಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಕಮಾಂಡರ್​ ಮೋಸ್ಟ್...

ಪಂಜಾಬ್ ಪೊಲೀಸರಿಂದ ಉಗ್ರ ಜಾಕೀರ್ ಮೂಸಾ ವಾಂಟೆಡ್ ಪೋಸ್ಟರ್ ಬಿಡುಗಡೆ
ಪೋಸ್ಟರ್
Published On :
ಅಮೃತಸರ: ಪಂಜಾಬ್ ಪೊಲೀಸರು, ಜಮ್ಮು ಮತ್ತು ಕಾಶ್ಮೀರದ ಅನ್ಸರ್​ ಘಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಕಮಾಂಡರ್​ ಮೋಸ್ಟ್​ ವಾಂಟೆಡ್​ ಉಗ್ರ ಜಾಕೀರ್ ಮೂಸಾನ ವಾಂಟೆಡ್ ಪೋಸ್ಟರ್ ಗಳನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಉಗ್ರ ಮೂಸಾ ಅಮೃತಸರದ ಬಳಿ ಕಾಣಿಸಿಕೊಂಡಿದ್ದಾನೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಂಜಾಬ್​ ಮತ್ತು ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 
ಮೂಸಾ ಜೈಷ್ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ ಐವರು ಉಗ್ರರೊಂದಿಗೆ ಶುಕ್ರವಾರ ಅಮೃತಸರದ ಬಳಿ ಸುತ್ತಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಉಗ್ರನ ವಾಂಟೆಡ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಮೂಸಾ ಬಗ್ಗೆ ಮಾಹಿತಿ ನೀಡಬೇಕು ಎಂದು ಗುರುದಾಸ್ಪುರ್ ಎಸ್ ಎಸ್ ಪಿ ಸ್ವರ್ಣದೀಪ್ ಸಿಂಗ್ ಅವರು ಮನವಿ ಕೋರಿದ್ದಾರೆ.
ಗುಪ್ತಚರ ಮಾಹಿತಿ ಪ್ರಕಾರ ಈತ ಜೈಷ್ ಉಗ್ರರ ಜತೆ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್​ನಿಂದ ಹೊರ ಹೋಗುವ ದಾರಿಗಳು ಮತ್ತು ದೆಹಲಿಗೆ ಪ್ರವೇಶ ಒದಗಿಸುವ ದಾರಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.