ಅಮೆರಿಕದಿಂದ 13,500 ಕೋಟಿ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದು!
ಭಾರತೀಯ ಸೇನಾ ಬಲವರ್ಧನೆ ಮತ್ತು ಸೇನೆ ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Published On :
ನವದೆಹಲಿ: ಭಾರತೀಯ ಸೇನಾ ಬಲವರ್ಧನೆ ಮತ್ತು ಸೇನೆ ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ರಷ್ಯಾ ಜೊತೆ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಯ ಬೆನ್ನಲ್ಲೇ ಭಾರದ ವಿರುದ್ಧ ಅಮೆರಿಕ ಮುನಿಸಿಕೊಂಡು ನಿರ್ಬಂಧ ಹೇರುವ ಮಾತನಾಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ಸರ್ಕಾರ ಅಮೆರಿಕವನ್ನು ಸಂತೈಸುವ ಪ್ರಯತ್ನ ಮಾಡಿದ್ದು, ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
ಅಮೆರಿಕದ ಸಿಕೋಸ್ಕಿ ಲಾಕ್ ಹೀಡ್ ಮಾರ್ಟಿನ್ ನಿರ್ಮಾಣದ ಬಹುಪಯೋಗಿ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಗಳನ್ನು ಭಾರತ ಖರೀದಿಸಲು ಮುಂದಾಗಿದ್ದು, ಈ ಚಾಪರ್ ಗಳು ಟಾರ್ಪೆಡೋ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿವೆ. ಅಂತೆಯೇ ಆಗಸದಿಂದಲೇ ಶತೃಪಾಳಯದ ಜಲಾಂತರ್ಗಾಮಿ ನೌಕೆಗಳನ್ನು ಕಂಡು ಹಿಡಿದು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.
ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ ಎನ್ನಲಾಗಿದೆ. ಈಗಾಗಲೇ ಸಾಗರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್-60 ಬಹುಪಯೋಗಿ ಹೆಲಿಕಾಪ್ಟರ್ ನ ಅವಶ್ಯಕತೆಯಿದ್ದು, ಅಮೆರಿಕದೊಂದಿಗೆ ಸರ್ಕಾರ ಶೀಘ್ರ ಒಪ್ಪಂದ ಅಂತಿಮಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


