ದೇಶ

ಹೆಸರು ಬದಲಿಸುವುದರಿಂದ ದೇಶ ಶ್ರೀಮಂತವಾಗುತ್ತದೆ ಎಂದಾದರೇ, ಎಲ್ಲರಿಗೂ 'ರಾಮ'ನ ಹೆಸರಿಡಿ: ಹಾರ್ದಿಕ್ ಪಟೇಲ್

ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತ ದೇಶ ಆಗುತ್ತದೆ ಎಂದರೇ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ...

ಹೆಸರು ಬದಲಿಸುವುದರಿಂದ ದೇಶ ಶ್ರೀಮಂತವಾಗುತ್ತದೆ ಎಂದಾದರೇ, ಎಲ್ಲರಿಗೂ 'ರಾಮ'ನ ಹೆಸರಿಡಿ: ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Published On :
ಗುಜರಾತ್: ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತ ದೇಶ ಆಗುತ್ತದೆ ಎಂದರೇ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೈಜಾಬಾದನ್ನು ಅಯೋಧ್ಯೆ ಎಂದೂ, ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದೂ ಪುನರ್‌ ನಾಮಕರಣ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರವನ್ನು ಲೇವಡಿ ಮಾಡಿದರು.
ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ದೇಶವನ್ನು ಚಿನ್ನದ ಹಕ್ಕಿಯನ್ನಾಗಿ ಮಾಡಬಹುದು ಎಂದು ನೀವು ಭಾವಿಸುವುದಾದರೆ ದೇಶದ ಎಲ್ಲ 125 ಕೋಟಿ ಜನರ ಹೆಸರನ್ನು ರಾಮನೆಂದು ಬದಲಾಯಿಸಿ' ಎಂದು ಹೇಳಿದರು. 
ಯೋಗಿ ಆದಿತ್ಯನಾಥ್‌ ಅವರು ನಗರ ಪುನರ್‌ ನಾಮಕರಣಕ್ಕೆ ಕೈ ಹಚ್ಚಿದ ಬಳಿಕ ದೇಶದ ಇತರ ಭಾಗದಲ್ಲಿನ ನಗರಗಳು ಮತ್ತು ಸ್ಥಳಗಳ ಹೆಸರನ್ನು ಬದಲಾಯಿಸಬೇಕೆಂಬ ಕೂಗು ಈಗ ವ್ಯಾಪಕವಾಗಿ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.