ತಮಿಳುನಾಡಿಗೆ 'ಗಜ' ಭೀತಿ: 7 ಜಿಲ್ಲೆಗಳಲ್ಲಿ ಕರೆಂಟ್ ಕಟ್ ಮಾಡಲು ಜಿಲ್ಲಾಡಳಿತಕ್ಕೆ ಸಲಹೆ!
ಗಜ ಚಂಡಮಾರುತ ತಮಿಳುನಾಡಿನ ಆರು ಜಿಲ್ಲೆಗಳ ಕಡಲ ಕಿನಾರೆಗೆ ಗಂಟೆಗೆ 285 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸಲಿದ್ದು ಮುಂಜಾಗೃತ...

Published On :
ಚೆನ್ನೈ: ಗಜ ಚಂಡಮಾರುತ ತಮಿಳುನಾಡಿನ ಆರು ಜಿಲ್ಲೆಗಳ ಕಡಲ ಕಿನಾರೆಗೆ ಗಂಟೆಗೆ 285 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸಲಿದ್ದು ಮುಂಜಾಗೃತ ಕ್ರಮವಾಗಿ ಏಳು ಜಿಲ್ಲೆಗಳಲ್ಲಿ ಕರೆಂಟ್ ಕಟ್ ಮಾಡುವುದು ಸೂಕ್ತ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಗಜ ಚಂಡಮಾರುತ ಭೀತಿಯಿಂದಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಇನ್ನು ಹಲವರು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿ ನಿರ್ವಹಣೆಗಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದ ರಾಜ್ಯ ಕಂದಾಯ ಸಚಿವ ಗಜ ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನತ್ತ ಪ್ರತಿ ಗಂಟೆಗೆ 10 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಚೆನ್ನೈಯಿಂದ 490 ಕಿಲೋ ಮೀಟರ್ ಮತ್ತು ನಾಗಪಟ್ಟಿಂನಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದರು.
ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿಗೆ ಚಲಿಸಿದ ನಂತರ ಮುಂದಿನ 12 ಗಂಟೆಗಳಲ್ಲಿ ಅದರ ಪರಿಣಾಮ ತೀವ್ರವಾಗಿರುತ್ತದೆ. ನಂಚರ ಅದು ಪಂಬನ್ ಮತ್ತು ಕದ್ದಲೂರುಗಳಲ್ಲಿ ನೆಲೆಯಾಗಲಿದೆ. ಚಂಡಮಾರುತದಿಂದಾಗಿ ಕದ್ದಲೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆಯಾಗಲಿದೆ.
ಹೀಗಾಗಿ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಇದೇ ವೇಳೆ ಗಲೆ ಚಂಡಮಾರುತ ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಚಂಡಮಾರುತದಿಂದಾಗಿ ನಾಗಪಟ್ಟಿಂ, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಸಮುದ್ರ ನೀರಿನ ಒಳಹರಿವು ಹೆಚ್ಚಾಗಲಿದೆ. ಇದರಿಂದ ಗುಡಿಸಲುಗಳು, ವಿದ್ಯುತ್ ಮತ್ತು ಟೆಲಿಕಾಂ ಕೇಬಲ್ ಸೇವೆಗಳಿಗೆ ಹಾನಿಗೀಡಾಗಬಹುದು. ಗಿಡ-ಮರಗಳು ನೆಲಕ್ಕುರುಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಯಾವುದೇ ಕ್ಷಣದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಲು ರಣವೀರ್ ಮತ್ತು ಖಂಜಾರ್ ಎಂಬ ಎರಡು ಭಾರತೀಯ ನೌಕಾ ಹಡಗುಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇನ್ನು ಎರಡು ಮೂರು ದಿನಗಳವರೆಗೆ ವ್ಯಾಪಕ ಮಳೆಯಾಗುವ ಸೂಚನೆಯಿರುವುದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೆಟ್ರೋಲಿಯಂ ಬಂಕ್ ಗಳಲ್ಲಿ ಸಾಕಷ್ಟು ಪೆಟ್ರೋಲ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅನಿಯಮಿತಿ ಟೆಲಿಕಾಂ ಸೇವೆ ನೀಡಲು 15 ದಿನಗಳವರೆಗೆ ಸಾಕಷ್ಟು ಇಂಧನವನ್ನು ಉತ್ಪತ್ತಿ ಮಾಡಿ ಸಂಗ್ರಹಿಸಲು ಸೂಚಿಸಲಾಗಿದೆ. ನಾಗಪಟ್ಟಿಂ ಮತ್ತು ಕದ್ದಲೂರು ಜಿಲ್ಲೆಗಳಲ್ಲಿ ಅನಿಯಮಿತ ಸೇವೆ ನೀಡಲು ಸೆಲ್ ಆನ್ ವೀಲ್ಸ್ ನೀಡಲಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.