ತಮಿಳುನಾಡು: 2 ಸಾವಿರ ರೂ.ಸಾಲ ಹಿಂತಿರುಗಿಸಲು ಐದು ವರ್ಷ ಜೀತದಾಳಾಗಿ ದುಡಿದ ಬಾಲಕ
ತಂದೆ ಮಾಡಿದ 2 ಸಾವಿರ ರೂಪಾಯಿ ಸಾಲ ಹಿಂತಿರುಗಿಸಲು 9 ವರ್ಷದ ಬಾಲಕನೊಬ್ಬ ಐದು ವರ್ಷಗಳ ಕಾಲ ಜೀತದಾಳಾಗಿ ದುಡಿದಿರುವ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಬಳಿ ನಡೆದಿದೆ.

ವೆಲ್ಲೂರು: ತಂದೆ ಮಾಡಿದ 2 ಸಾವಿರ ರೂಪಾಯಿ ಸಾಲ ಹಿಂತಿರುಗಿಸಲು 9 ವರ್ಷದ ಬಾಲಕನೊಬ್ಬ ಐದು ವರ್ಷಗಳ ಕಾಲ ಜೀತದಾಳಾಗಿ ದುಡಿದಿರುವ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಬಳಿ ನಡೆದಿದೆ.
ಅರುಲ್ ಕುಮಾರ್ ಎಂಬ ಬಾಲಕ ಐದು ವರ್ಷದವನಾಗಿದ್ದಾಗ ಆತನ ತಂದೆ ಶರವಣ 2 ಸಾವಿರ ರೂಪಾಯಿಗಾಗಿ ಜೀತದಾಳಾಗಿ ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದಾನೆ. ಎರಡು ವರ್ಷದ ನಂತರ ಸಾಲ ಹಿಂತಿರುಗಿಸದೆ ಆತ ಮೃತಪಟ್ಟಿದ್ದು, ಆ ಬಾಲಕ ಈವರೆಗೂ ಜೀತದಾಳು ಆಗಿಯೇ ಜೀವ ಸವೆಸುತ್ತಿದ್ದ.
ಐದು ವರ್ಷ ದುಡಿದ ನಂತರ 9 ವರ್ಷದ ಬುಡಕಟ್ಟು ಸಮುದಾಯದ ಬಾಲಕನನ್ನು ರಕ್ಷಿಸಲಾಗಿದ್ದು, ನವೆಂಬರ್ 14 ರಂದು ತಿರುಪತ್ತೂರಿನ ಸರ್ಕಾರಿ ವಸತಿ ಶಾಲೆಗೆ ಸೇರಿಸಲಾಗಿದೆ.
ಬುಡಕಟ್ಟು ಜನರ ಬಗ್ಗೆ ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆದಿವಾಸಿ ಸಮಿತಿಯ ತಂಡವೊಂದು ಅರುಲ್ ತಾಯಿ ಭೇಟಿ ಮಾಡಿದ್ದು, ಆತ ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲಸ ಮಾಡುತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿತು ಎಂದು ಸುಸ್ಥಿರ ಅಭಿವೃದ್ಧಿ ಫೌಂಡೇಷನ್ ಕಾರ್ಯಕಾರಿ ನಿರ್ದೇಶಕ ಕೆ. ಕೃಷ್ಣನ್ ಹೇಳಿದರು.
ಅರುಲ್ ಪತ್ತೆಗಾಗಿ ಆರು ತಿಂಗಳ ಹಿಂದೆಯೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತಾದರೂ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡದಿಂದ ವಾರದ ಹಿಂದಷ್ಟೇ ಆತನನ್ನು ಪತ್ತೆ ಮಾಡಿ ತಿರುಪತ್ತೂರು ಉಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರುಪಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


