ನ.17ರಿಂದ ಮತ್ತೆ ಶಬರಿಮಲೆ ದರ್ಶನ ಆರಂಭ, 5200 ಪೊಲೀಸರ ನಿಯೋಜನೆ
ಎರಡು ತಿಂಗಳ ಕಾಲ ನಡೆಯುವ ವಾರ್ಷಿಕ ಮಂಡಲೋತ್ಸವ ಹಾಗೂ ಮಕರವಿಳಕ್ಕುಂ ಪೂಜೆಗಾಗಿ ನವೆಂಬರ್ ....

Published On :
ತಿರುವನಂತಪುರಂ: ಎರಡು ತಿಂಗಳ ಕಾಲ ನಡೆಯುವ ವಾರ್ಷಿಕ ಮಂಡಲೋತ್ಸವ ಹಾಗೂ ಮಕರವಿಳಕ್ಕುಂ ಪೂಜೆಗಾಗಿ ನವೆಂಬರ್ 17ರಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಕೇರಳ ಸರ್ಕಾರ 5200 ಪೊಲೀಸರನ್ನು ನಿಯೋಜಿಸಿದೆ.
ಸನ್ನಿಧಾನಂ ಮತ್ತು ನಿಲಕ್ಕಲ್ ಎರಡೂ ಕಡೆ ಭದ್ರತೆಯನ್ನು ನೋಡಿಕೊಳ್ಳಲು ಐಜಿ ಹಾಗೂ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಶಬರಿಮಲೆಯ ಒಟ್ಟಾರೆ ಭದ್ರತೆಯ ಜವಾಬ್ದಾರಿಯನ್ನು ಎಡಿಜಿಪಿ ಅನಿಲ್ ಕಾಂತ್ ಅವರಿಗೆ ವಹಿಸಲಾಗಿದೆ.
ಅರಣ್ಯ ಪ್ರದೇಶದ ಪಾದಯಾತ್ರೆ ಮಾರ್ಗದಲ್ಲೂ ಗಸ್ತು ತಿರುಗಲು ಪೊಲೀಸರು ನಿರ್ಧರಿಸಿದ್ದಾರೆ.
ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ ನಂತರ ಮೂರನೇ ಬಾರಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದು, ಈ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು 10 ರಿಂದ 50 ವರ್ಷದ ಸುಮಾರು 600 ಮಹಿಳೆಯರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷವೂ ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಕೇರಳ ಪೋಲೀಸರು ಆನ್ ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಭಕ್ತಾದಿಗಳು ತಮಗೆ ಅನುಕೂಲವಾಗುವ ದಿನದಂದು ಸ್ವಾಮಿಯ ದರ್ಶನಕ್ಕಾಗಿ ಸಮಯವನ್ನು ಕಾಯ್ದಿರುವ ಸೌಲಭ್ಯ ಇದಾಗಿದೆ. ಇದು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೇಗೆ ಆನ್ ಲೈನ್ ದರ್ಶನ ಕಾಯ್ದಿರಿಸುವ ವ್ಯವಸ್ಥೆ ಇದೆಯೋ ಹಾಗೆಯೇ ಕಾರ್ಯನಿರ್ವಹಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


