ನಿವೃತ್ತಿ ನಿಧಿ ಹಣದಲ್ಲಿ ಪಾಲು ನೀಡದಕ್ಕೆ ತಂದೆಯನ್ನೇ ಕೊಂದ ಕಿರಾತಕ!
ನಿವೃತ್ತಿ ನಂತರದ ಹಣವನ್ನು ನೀಡದ ಹಿನ್ನೆಲೆಯಲ್ಲಿ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಅಮಾನುಷ ಘಟನೆ..

Published On :
ತೆಲಂಗಾಣ: ನಿವೃತ್ತಿ ನಂತರದ ಹಣವನ್ನು ನೀಡದ ಹಿನ್ನೆಲೆಯಲ್ಲಿ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಅಮಾನುಷ ಘಟನೆ ತೆಲಂಗಾಣದ ರಚಕೊಂಡಾ ಪ್ರದೇಶದಲ್ಲಿ ನಡೆದಿದೆ.
ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಎಂಬಾತ 2017ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ನಿಧಿಯ ಉಳಿತಾಯದಿಂದ ಸುಮಾರು 6 ಲಕ್ಷ ರು ಹಣ ಬಂದಿತ್ತು. ಜೊತೆಗೆ ತಮ್ಮ ಹೆಸರಿನಲ್ಲಿದ್ದ ಜಮೀನನ್ನು 10 ಲಕ್ಷ ರೂ ಗೆ ಮಾರಾಟ ಮಾಡಿದ್ದರು.
ಕೃಷ್ಣಪ್ಪ ಅವರ ಮಗ ತರುಣ್ ಈ ಹಣವನ್ನು ಥನ್ನ ಇನ್ನಿಬ್ಬರು ಸಹೋದರಿಯರು ಸೇರಿದಂತೆ ಮೂವರಿಗೂ ಹಂಚುವಂತೆ ಕೇಳಿದ್ದ. ಆದರೆ ಕೃಷ್ಣಪ್ಪ ತನ್ನ ಬಳಿ 2 ಲಕ್ಷ ಹಣ ಇಟ್ಟುಕೊಂಡು ಉಳಿದ ಹಣವನ್ನು ಮೂವರಿಗೂ ಹಂಚಿದ್ದರು.
ಕೆಲ ದಿನಗಳ ನಂತರ ಕೃಷ್ಣಪ್ಪ ಬಳಿಯಿದ್ದ 2 ಲಕ್ಷ ರು ಹಣವನ್ನು ನೀಡುವಂತೆ ತರುಣ್ ಕಿರುಕುಳ ಆರಂಭಿಸಿದ. ಆದರೆ ಅದನ್ನು ನೀಡಲು ನಿರಾಕರಿಸಿದ ಕಾರಣ ರಾಡ್ ನಿಂದ ಕೃಷ್ಣ ತಲೆಗೆ ಹೊಡೆದಿದ್ದಾನೆ., ಈ ವೇಳೆ ಕೃಷ್ಣ ಪ್ರಜ್ಞಾಹೀನನಾಗಿ ಬಿದ್ದಿದ್ದು, ತರುಣ್ ಗೆ ಸಹೋದರಿಯರು ಬೆಂಬಲ ನೀಡಿದ್ದಾರೆ.
ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತದರೂ ಅಷ್ಟರಲ್ಲಾಗಲೇ ಕೃಷ್ಣ ಮೃತ ಪಟ್ಟಿದ್ದ,. ಈ ಸಂಬಂಧ ಪ್ರಕರಣ ದಾಖಲಿಸಿಕೊಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


