ದೇಶ

ಪ್ರಧಾನಿ ಮೋದಿ ಪರ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಟಿಂಗ್!

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳೆಲ್ಲಾ ಒಗ್ಗೂಡಿ ಹೋರಾಟ ನಡೆಸಲಿವೆ ಎಂಬ ಮಾತುಗಳ ನಡುವೆ ಸೂಪರ್ ಸ್ಟಾರ್ ಮೋದಿ ವಿರುದ್ಧ 10 ಜನ ಒಗ್ಗೂಡಿದ್ದರೂ ಅವರೇ ಸಮರ್ಥ ಎಂದು ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಪರ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಟಿಂಗ್!
ರಜನಿಕಾಂತ್
Published On :

ಚೆನ್ನೈ:  2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳೆಲ್ಲಾ  ಒಗ್ಗೂಡಿ ಹೋರಾಟ ನಡೆಸಲಿವೆ ಎಂಬ ಮಾತುಗಳ ನಡುವೆ ಸೂಪರ್ ಸ್ಟಾರ್  ಮೋದಿ ವಿರುದ್ಧ 10 ಜನ ಒಗ್ಗೂಡಿದ್ದರೂ ಅವರೇ  ಸಮರ್ಥ ಎಂದು ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷಗಳ ಮಹಾಮೈತ್ರಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರ ವಿರುದ್ಧ 10 ಜನರು ಒಂದುಗೂಡಿದಾಗ ಯಾರು ಬಲಿಷ್ಠ .  ಒಬ್ಬ ವ್ಯಕ್ತಿಯ ವಿರುದ್ಧ 10 ಜನರು ಒಂದಾದರೆ ಯಾರೂ ಸಮರ್ಥರು ರಜನಿಕಾಂತ್ ಹೇಳಿದ್ದಾರೆ.

ವಿಪಕ್ಷಗಳೆಲ್ಲಾ ಬಿಜೆಪಿ ಅಪಾಯಕಾರಿ ಎನ್ನುತ್ತಿವೆ ಎಂದಾದರೆ ಅದು ಅಪಾಯಕಾರಿಯೇ ಆಗಿರಬೇಕು ಎಂದು ನಿನ್ನೆ ನೀಡಿದ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿದ ರಜನಿಕಾಂತ್, ಪ್ರತಿಪಕ್ಷಗಳು ಈ ರೀತಿಯ ಭಯದಲ್ಲಿಯೇ ಎನ್ನುವ ಭಾವದಲ್ಲಿ ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸುತ್ತೀರಾ ಎಂಬ ಪ್ರಶ್ನೆಗೆ ನಂತರ ನಿರ್ಧರಿಸುವುದಾಗಿ ಹೇಳಿದರು.  ರಜನಿಕಾಂತ್ ಪಕ್ಷವನ್ನು ಇನ್ನೂ ಅಧಿಕೃತಗೊಳಿಸದಿದ್ದರೂ 2021ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ರಜನಿಕಾಂತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.