100ರ ನೆನಪು: ಜಾಗತಿಕ ಸಮರದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರಿಗೆ ಮೋದಿ ನಮನ
ಮೊದಲ ಜಾಗತಿಕ ಸಮರ ನಡೆದು ಇಂದಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

Published On :
ನವದೆಹಲಿ: ಮೊದಲ ಜಾಗತಿಕ ಸಮರ ನಡೆದು ಇಂದಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.
"ಶಾಂತಿ ಕಾಪಾಡುವ ಸಲುವಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಭಾರತೀಯ ಯೋಧರನ್ನು ದೇಶ ಸದಾ ಸ್ಮರಿಸುತ್ತದೆ" ಅವರು ಹೇಳಿದ್ದಾರೆ.
ಟಿಟ್ಟರ್ ನಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧರನ್ನು ಸ್ಮರಿಸಿದ ಪ್ರಧಾನಿ ಇಂದು, ಭಯಾನಕ ಮೊದಲ ವಿಶ್ವ ಸಮರ ಅಂತ್ಯವಾಗಿ ನೂರು ವರ್ಷ ತುಂಬಿದೆ.ಸಾಮರಸ್ಯ ಮತ್ತು ಸಹೋದರತ್ವದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಶಾಂತಿ ಮತ್ತು ಪ್ರತಿಜ್ಞೆಯನ್ನು ಕಡೆಗೆ ನಮ್ಮ ಬದ್ಧತೆಯನ್ನು ನಾವು ಮತ್ತಷ್ಟು ಬಲವಾಗಿಸಿಕೊಳ್ಳಬೇಕಿದೆ.ಮತ್ತೆ ಅಂತಹಾ ಯುದ್ಧಗಳು, ವಿನಾಶ ಸಂಭವಿಸದಂತೆ ನಾವು ಎಚ್ಚರಿಕೆ ವಹಿಸಬೇಕು" ಎಂದಿದ್ದಾರೆ.
ಭಾರತವು ಮೊದಲ ಮಹಾಯುದ್ಧದಲ್ಲಿ ನೇರವಾಗಿ ತೊಡಗದಿದ್ದರೂ ನಮ್ಮ ಸೈನಿಕರು ಶಾಂತಿಗಾಗಿ ವಿಶ್ವದಾದ್ಯಂತ ಹೋರಾಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಬಂದಾಗ, ನಾವು ತೀನ್ ಮೂರ್ತಿ ಹೈಫಾ ಚೌಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದ್ದೆವು ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಮೊದಲ ವಿಶ್ವ ಸಮರ ಜುಲೈ 28, 1914ರಿಂದ ಪ್ರಾರಂಭವಾಗಿ ನವೆಂಬರ್ 11, 1918ರಲ್ಲಿ ಕೊನೆಗೊಂಡಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


