ಫರೀದಾಬಾದ್: ಟಾಟಾ ಸ್ಟೀಲ್ ಹಿರಿಯ ಮ್ಯಾನೇಜರ್ ಗೆ ಗುಂಡಿಕ್ಕಿ ಕೊಂದ ಮಾಜಿ ನೌಕರ!
ಟಾಟಾ ಸ್ಟೀಲ್ ಕಂಪನಿಯ ಹಿರಿಯ ಮ್ಯಾನೇಜರ್ ಗೆ ಕಂಪನಿಯ ಮಾಜಿ ನೌಕರನೊಬ್ಬ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ,...

Published On :
ಫರೀದಾಬಾದ್: ಟಾಟಾ ಸ್ಟೀಲ್ ಕಂಪನಿಯ ಹಿರಿಯ ಮ್ಯಾನೇಜರ್ ಗೆ ಕಂಪನಿಯ ಮಾಜಿ ನೌಕರನೊಬ್ಬ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ,
ಶುಕ್ರವಾರ ಸುಮಾರು 1.10 ನಿಮಿಷಕ್ಕೆ ಫರೀದಾಬಾದ್ ನ ಕಚೇರಿಯಲ್ಲಿ ಮ್ಯಾನೇಜರ್ ಅರವಿಂದಮ್ ಪಲ್ ಅವರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
ಕೂಡಲೇ ಅರವಿಂದಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯವೇ ಅವರು ಕೊನೆಯುಸಿರೆಳೆದಿದ್ದಾರೆ.
ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಕಂಪನಿಯಲ್ಲಿ ಪಾಂಡೆ, 2015ರಿಂದ 2018ರ ವರೆಗೆ ಕೆಲಸ ಮಾಡಿದ್ದ, ಈ ವರ್ಷದ ಆಗಸ್ಟ್ ತಿಂಗಳಿನಿಂದ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅರವಿಂದ್ ದೇಹದೊಳಗೆ ಐದು ಬುಲೆಟ್ ಗಳು ಹೊಕ್ಕಿದ್ದವು. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


