ಭಾರತೀಯ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ ಲಂಡನ್ ಮಾಧ್ಯಮ ಸ್ವಾತಂತ್ರ್ಯ ಪ್ರಶಸ್ತಿ
ಭಾರತದ ಫ್ರೀಲಾನ್ಸ್ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018 ನೇ ಸಾಲಿನ ಲಂಡಾನ್ ಪತ್ರಿಕಾ ಸ್ವಾತಂಟ್ರ್ಯ ಪ್ರಶಸ್ತಿ ಲಭಿಸಿದೆ.

Published On :
ಭಾರತದ ಫ್ರೀಲಾನ್ಸ್ ಪತ್ರಕರ್ತೆ ಸ್ವಾತಿ ಚತುರ್ವೇದಿಗೆ ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018 ನೇ ಸಾಲಿನ ಲಂಡಾನ್ ಪತ್ರಿಕಾ ಸ್ವಾತಂಟ್ರ್ಯ ಪ್ರಶಸ್ತಿ ಲಭಿಸಿದೆ.
ತನಿಖಾ ವರದಿಗಳಿಂದಲೇ ಖ್ಯಾತಿ ಪಡೆದಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರ ಐ ಆಪ್ ಎ ಟ್ರೋ: ಇನ್ ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪಿಸ್ ಡಿಜಿಟಲ್ ಆರ್ಮಿ ಕೃತಿಗೆ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ವಾತಿ ಚತುರ್ವೇದಿ ಅವರ ತನಿಖಾ ವರದಿಗಳು ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿವೆ.
ದ್ವೇಷಮಯ ಟ್ರೋಲ್ ಗಳನ್ನು ಬಿಜೆಪಿಯ ಐಟಿ ಸೆಲ್ ನಲ್ಲಿ ಹೇಗೆ ಹರಿಯಬಿಡಲಾಗುತ್ತದೆ ಎಂಬುದನ್ನು ಸ್ವಾತಿ ತಮ್ಮ ಕೃತಿಯಲ್ಲಿ ಬಹಿರಂಗಗೊಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾತಿ ಚತುರ್ವೇದಿ, ನನ್ನ ಕರ್ತವ್ಯ ನಾನು ಮಾಡುತ್ತಿರುವುದಕ್ಕಾಗಿ ಶೌರ್ಯ ಪ್ರಶಸ್ತಿ ಪಡೆಯಬೇಕಾಗಿರುವುದು ಖೇದಕರ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳುತ್ತಾರೆ ನಾವು ರಾಷ್ಟ್ರವಿರೋಧಿಗಳೆಂದು ಭಾರತದಲ್ಲಿ ಕಳೆದ ವರ್ಷ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ, ಈ ರೀತಿಯ ಘಟನೆಗಳು ಭಯ ಮೂಡಿಸುತ್ತವೆ ಎಂದು ಚತುರ್ವೇದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


