ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ'ವಾಗಿ ಬದಲಾವಣೆ: ಬಿಜೆಪಿ ಶಾಸಕ
2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ...

Published On :
ಹೈದರಾಬಾದ್: 2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ಘೋಷ ಮಹಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜಾಸಿಂಗ್, ಕೇವಲ ಹೈದರಾಬಾದ್ ಮಾತ್ರವಲ್ಲದೇ ಸಿಕಂದರಾಬಾದ್ ಮತ್ತು ಕರೀಮ್ ನಗರಗಳ ಹೆಸರನ್ನು ಬಿಜೆಪಿ ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ಮೊದಲು ಹೈದರಾಬಾದ್ ಭಾಗ್ಯನಗರವಾಗಿತ್ತು, 1590 ರಲ್ಲಿ ಕ್ವಿಲ್ ಕುತುಬ್ ಷಾ ಆಗಮಿಸಿ ಭಾಗ್ಯನಗರವನ್ನು ಹೈದಾರಾಬಾದ್ ಎಂಬುದಾಗಿ ಬದಲಾಯಿಸಿದ. ಆ ವೇಳೆ ಹಲವು ಹಿಂದಗಳ ಮೇಲೆ ದಾಳಿ ನಡೆಯಿತು, ಹಲವು ದೇವಾಲಯಗಳು ನಾಶವಾದವು . ಹೀಗಾಗಿ ನಾವು ಹೈದರಾಬಾದ್ ಗೆ ಮರು ನಾಮಕರಣ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


