3 ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಕಿರಾತಕ: ಸಂತ್ರಸ್ತೆಯ ಸ್ಥಿತಿ ಗಂಭೀರ
ಯುವಕನೋರ್ವ ಮೂರು ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Published On :
ಲಖನೌ: ಯುವಕನೋರ್ವ ಮೂರು ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪಟಾಕಿ ಸಿಡಿದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ದೌರಲಾ ರೋಡ್ ನಲಿರುವ ಮಲಿಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದುಷ್ಕೃತ್ಯ ಎಸಗಿರುವ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆದಿದೆ.
ಈ ಕೃತ್ಯ ಎಸಗಿರುವ ಯುವಕ ಹರ್ಪಾಲ್ ಎಂದು ತಿಳಿದುಬಂದಿದ್ದು, ಮನೆಯ ಮುಂಭಾಗದಲ್ಲಿ ಆಡುತ್ತಿದ್ದ ಮಗಳ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ್ದಾನೆ ಎಂದು ಬಾಲಕಿಯ ತಂದೆ ಶಶಿಕುಮಾರ್ ಆರೋಪಿಸಿದ್ದಾರೆ. ಸಂತ್ರಸ್ತ ಬಾಲಕಿಯ ಬಾಯಿಗೆ 50 ಹೊಲಿಗೆ ಹಾಕಲಾಗಿದ್ದು, ಗಂಟಲಿಗೆ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


