ತೆಲಂಗಾಣ: ಟಿಆರ್ ಎಸ್ ನಾಯಕನನ್ನು ಕಲ್ಲು ಹೊಡೆದು ಕೊಂದ ದುಷ್ಕರ್ಮಿಗಳು!
ತೆಲಂಗಾಣ ರಾಷ್ಟರ ಸಮಿತಿ (ಟಿಆರ್ ಎಸ್) ನಾಯಕ ನಾರಾಯಣ ರೆಡ್ಡಿ ಎನ್ನುವವರನ್ನು ದುಷ್ಕರ್ಮಿಗಳು ಕಲ್ಲು ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್......

Published On :
ಹೈದರಾಬಾದ್: ತೆಲಂಗಾಣ ರಾಷ್ಟ ಸಮಿತಿ (ಟಿಆರ್ ಎಸ್) ನಾಯಕ ನಾರಾಯಣ ರೆಡ್ಡಿ ಎನ್ನುವವರನ್ನು ದುಷ್ಕರ್ಮಿಗಳು ಕಲ್ಲು ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 6.15ಕ್ಕೆ ಈ ಘಟನೆ ನಡೆದಿದೆ. ನಾರಾಯಣ ರೆಡ್ಡಿ ಹತ್ಯೆ ತನಿಖೆ ಕೈಗೊಂಡಿರುವ ಪೋಲೀಸರು ಈ ಹತ್ಯೆ ಹಿಂದೆ ರಾಜಕೀಯದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣವೆನ್ನಲಾಗಿದ್ದು ಈ ಪ್ರದೇಶದ ಪ್ರಭಾವಿ ಮುಖಂಡರಾಗಿದ್ದ ನ್ರಾಯಣ ರೆಡ್ಡಿ ಗ್ರಾಮದ ಇನ್ನೊಂದು ಗುಂಪಿನ ಜನಗಳೊಡನೆ ವೈರತ್ವ ಹೊಂದಿದ್ದರು. ಅಲ್ಲದೆ ಆ ಗುಂಪಿನ ಮೇಲೆ ಹಿಂದೊಮ್ಮೆ ಹಲ್ಲೆ ನಡೆಸಿದ್ದರೆಂದು ಪ್ರಸಿದ್ದ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ಆದರೆ ನಾರಾಯಣ ರೆಡ್ಡಿ ಬೆಂಬಲಿಗರು ಇವರ ಸಾವಿನ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ನಾರಾಯಣ ರೆಡ್ಡಿ ಬೆಂಬಲಿಗರು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾರಾಯಣ ರೆಡ್ಡಿ ಹತ್ಯೆ ಕುರಿತಂತೆ ಪೋಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಬರುವ ಡಿಸೆಂಬರ್ 7ಕ್ಕೆ ತೆಲಂಗಾಣ ವಿಧಾನಸಭೆ ಚುನಾವಣೆ ಇದ್ದು ನಾರಾಯಣ ರೆಡ್ಡಿ ಸಾವು ಹಾಗ್ಯೂ ಕಾಮ್ಗ್ರೆಸ್ ಕಾರ್ಯಕರ್ತರ ಮೇಲಿನ ಹಲ್ಲೆ ಈ ಸುತ್ತಲ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


