ದೇಶ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತೇಜ್ ಪ್ರತಾಪ್ ಯಾದವ್ ನಾಪತ್ತೆ!?

ವಿವಾಹವಾಗಿದ್ದ ಕೆಲವೇ ತಿಂಗಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಈಗ ಏಕಾ ಏಕಿ ನಾಪತ್ತೆಯಾಗಿರುವ ಸುದ್ದಿ ಬಂದಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತೇಜ್ ಪ್ರತಾಪ್ ಯಾದವ್ ನಾಪತ್ತೆ!?
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತೇಜ್ ಪ್ರತಾಪ್ ಯಾದವ್ ನಾಪತ್ತೆ!
Published On :
ಪಾಟ್ನಾ: ವಿವಾಹವಾಗಿದ್ದ ಕೆಲವೇ ತಿಂಗಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಈಗ ಏಕಾ ಏಕಿ ನಾಪತ್ತೆಯಾಗಿರುವ ಸುದ್ದಿ ಬಂದಿದೆ.
ಬೋಧ್ ಗಯಾದ ಹೊಟೆಲ್ ರೂಮ್ ನಿಂದ ತೇಜ್ ಪ್ರತಾಪ್ ಯಾದವ್ ನಾಪತ್ತೆಯಾಗಿದ್ದ ಸುದ್ದಿ ಹರಡಿದ್ದು, ಮಂಗಳವಾರ ರಾತ್ರಿ ತೇಜ್ ಪ್ರತಾತ್ ಯಾದವ್ ನಾಪತ್ತೆಯಾಗಿರುವುದು ಕಂಡುಬಂದಿದ್ದು, ಪತ್ನಿ ಐಶ್ವರ್ಯ ರೈ ಯಿಂದ ವಿಚ್ಛೇದನ ಪಡೆಯಲು ತೀರ್ಮಾನಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 
ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ ಬಳಿಕ ತೇಜ್ ಪ್ರತಾಪ್ ಪಾಟ್ನಾಗೆ ಬರಬೇಕಿತ್ತು, ಆದರೆ ಬೋಧ್ ಗಯಾದಲ್ಲಿ ರಾತ್ರಿ ಉಳಿಯಲು ನಿರ್ಧರಿಸಿದ್ದರು. ಆದರೆ ಹೊಟೆಲ್ ರೂಮ್ ನಿಂದ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೊರಗೆ ಬಂದಿದ್ದ ತೇಜ್ ಪ್ರತಾಪ್ ಯಾದವ್, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. 
ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ ವೇಳೆ ಪತ್ನಿಗೆ ವಿಚ್ಚೇದನ ನೀಡುವುದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ, ಮೂಲಗಳ ಪ್ರಕಾರ ತೇಜ್ ಪ್ರತಾಪ್ ಯಾದವ್ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.