ಮಹಿಳೆಯರನ್ನು ನೋಡಲು ಇಚ್ಛಿಸದ ಅಯ್ಯಪ್ಪ ದೇವರೇ ಅಲ್ಲ: ಪ್ರಕಾಶ್ ರೈ
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಕಾಶ್ ರೈ ಟ್ರೆಂಡಿಂಗ್ ನಲ್ಲಿರುವ ಎಲ್ಲಾ ವಿಷಯಗಳ ಬಗ್ಗೆಯೂ ಒಂದಲ್ಲಾ ಒಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಈಗ ಅವರ ಹೇಳಿಕೆ ಬಂದಿರುವುದು ಶಬರಿಮಲೆ

Published On :
ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಕಾಶ್ ರೈ ಟ್ರೆಂಡಿಂಗ್ ನಲ್ಲಿರುವ ಎಲ್ಲಾ ವಿಷಯಗಳ ಬಗ್ಗೆಯೂ ಒಂದಲ್ಲಾ ಒಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಈಗ ಅವರ ಹೇಳಿಕೆ ಬಂದಿರುವುದು ಶಬರಿಮಲೆ ಅಯ್ಯಪ್ಪನ ಕುರಿತು.
ಗಲ್ಫ್ ಇಂಟರ್ ನ್ಯಾಷನಲ್ ಬುಕ್ ಫೇರ್ ನಲ್ಲಿ ಮಾತನಾಡಿರುವ ಪ್ರಕಾಶ್ ರೈ, ಶಬರಿಮಲೆಯಲ್ಲಿ ಮಹಿಳೆಯರಿಗೆ ವಯಸ್ಸಿನ ಮಿತಿ ನೋಡದೇ ಪ್ರವೇಶ ನೀಡಬೇಕೆಂಬ ನಿಲುವು ಪ್ರಕಟಿಸಿದ್ದು, ಮಹಿಳೆಯೆಂದರೆ ತಾಯಿ. ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಮಹಿಳೆಯಿಂದಲೇ ನಮಗೆ ಜನ್ಮ ಸಿಗುತ್ತದೆ. ಅದೇ ಮಹಿಳೆಯನ್ನು ಪೂಜೆಯಿಂದ ದೂರವಿಟ್ಟರೆ ಅದಕ್ಕೆ ಅರ್ಥವೇನು? ಮಹಿಳೆಯರು ಯುವತಿಯರಿಗೆ ಪೂಜೆಯಿಂದ ನಿರ್ಬಂಧ ವಿಧಿಸುವ ಧರ್ಮ ಧರ್ಮವೇ ಅಲ್ಲ ಎಂದು ಹೇಳಿದ್ದಾರೆ.
ಮಹಿಳೆಯರನ್ನು ದೇವಾಲಯ ಪ್ರವೇಶದಿಂದ ದೂರವಿರಿಸುವ ಭಕ್ತರು ಭಕ್ತರೇ ಅಲ್ಲ. ಮಹಿಳೆಯರನ್ನು ನೋಡಲೂ ಇಚ್ಛಿಸದ ಅಯ್ಯಪ್ಪ ದೇವರೇ ಅಲ್ಲ. ಮಹಿಳೆಯರನ್ನು ದೇವರ ದರ್ಶನ ಪಡೆಯುವುದರಿಂದ ನಿರ್ಬಂಧಿಸುವುದಕ್ಕೆ ಯಾರಿಗೂ ಹಕ್ಕು ಇಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


