ಮಂಗಳೂರು ಲಿಟ್ ಫೆಸ್ಟ್: ಸನ್ಮಾದ ಚೆಕ್ ಕಲ್ಲಡ್ಕ ಶಾಲೆಗೆ ದೇಣಿಗೆ-ಎಸ್ಎಲ್ ಭೈರಪ್ಪ
ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ತಮಗೆ ಸನ್ಮಾನದ ವೇಳೆ ನೀಡಲಾದ ಚೆಕ್ ನ್ನು ಕಲ್ಲಡ್ಕದ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

Published On :
ಮಂಗಳೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ತಮಗೆ ಸನ್ಮಾನದ ವೇಳೆ ನೀಡಲಾದ ಚೆಕ್ ನ್ನು ಕಲ್ಲಡ್ಕದ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಡಾ.ಎಸ್ಎಲ್ ಭೈರಪ್ಪ ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಎಸ್ಎಲ್ ಭೈರಪ್ಪ, "ಕಲ್ಲಡ್ಕ ಶಾಲೆಯಲಿನನ್ ಶಿಕ್ಷಣ ಪದ್ಧತಿ ನೋಡಿ ನನಗೆ ಆಶ್ಚರ್ಯವಾಯಿತು. ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಕಲ್ಲಡ್ಕ ಶಾಲೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರ ಶಾಲೆಗೆ ನೀಡಲಾಗುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿ ದೊಡ್ಡ ತಪ್ಪು ಮಾಡಿದೆ. ಆ ತಪ್ಪು ಮಾಡಿದವರಿಗೆ ಜನರು ಏನು ಪಾಠ ಕಲ್ಪಿಸಿದ್ದಾರೆ ಎಂಬುದೂ ಗೊತ್ತಿದೆ, ಶಾಲೆಯನ್ನು ನೋಡಿದ ಬಳಿಕ ದೇಣಿಗೆ ನೀಡಬೇಕು ಅಂದುಕೊಂಡೆ ಆದರೆ ಚೆಕ್ ಬುಕ್ ತಂದಿರಲಿಲ್ಲ ಆದ್ದರಿಂದ ಲಿಟ್ ಫೆಸ್ಟ್ ನಲ್ಲಿ ನೀಡಿರುವ ಚೆಕ್ ನ್ನು ಅದರ ಮೊತ್ತ ಎಷ್ಟು ಎಂಬುದನ್ನೂ ನೋಡದೇ ಹಾಗೆಯೇ ಶಾಲೆಗೆ ಹಸ್ತಾಂತರಿಸುತ್ತೇನೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SL Bhyrappaಎಸ್ಎಲ್ ಭೈರಪ್ಪಕಲ್ಲಡ್ಕMangaluru lit FestFelicitation awardKalladka\'s Sri Rama Vidya Kendraಮಂಗಳೂರು ಲಿಟ್ ಫೆಸ್ಟ್ಸನ್ಮಾನ ಚೆಕ್ಶ್ರೀರಾಮ ವಿದ್ಯಾ ಕೇಂದ್ರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


