ಅಂಗನವಾಡಿಗೆ ತಮ್ಮದೇ ಮಗುವನ್ನು ಸೇರಿಸಿ ಮಾದರಿಯಾದ ಮ್ಯಾಜಿಸ್ಟ್ರೇಟ್!
ಉತ್ತರಾಖಂಡದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಪುತ್ರನನ್ನೇ ಅಂಗನವಾಡಿಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Published On :
ಡೆಹ್ರಾಡೂನ್: ಉತ್ತರಾಖಂಡದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಪುತ್ರನನ್ನೇ ಅಂಗನವಾಡಿಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಉನ್ನತ ಹುದ್ದೆಯಲ್ಲಿರುವವರು ಯಾವತ್ತೂ ತಮ್ಮ ಮಕ್ಕಳನ್ನು ಹೈಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ. ಆದರೆ ಅದಕ್ಕೆ ಅಪವಾದವೆಂಬಂತೆ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದ್ದಾರೆ. ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಸ್ವಾತಿ ಭಡೌರಿಯಾ ಅವರು ತಮ್ಮ ಎರಡೂವರೆ ವರ್ಷದ ಮಗ ಅಭ್ಯುದಯ್ ನನ್ನು, ದುಬಾರಿ ಶಾಲೆಯ ಬದಲು ಗೋಪೇಶ್ವರ ಎಂಬ ಗ್ರಾಮದ ಅಂಗನವಾಡಿಗೆ ಸೇರಿಸಿದ್ದಾರೆ.
ಸರ್ಕಾರ ನಡೆಸುತ್ತಿರುವ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಮಕ್ಕಳ ವಿದ್ಯಾಭ್ಯಾಸವೂ ಅಷ್ಟಕ್ಕಷ್ಟೇ ಎಂಬ ತಪ್ಪು ಕಲ್ಪನೆಯನ್ನು ತೊಡೆದು ಹಾಕಲು ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ವಾತಿ ಅವರು ಹೇಳಿದ್ದಾರೆ. ಅಂಗನವಾಡಿಗಳಲ್ಲಿ ಶಿಕ್ಷಣ, ಆಟೋಟ ಹಾಗೂ ಊಟ-ತಿಂಡಿ ಎಲ್ಲವೂ ಒಟ್ಟೋಟ್ಟಾಗಿರುತ್ತದೆ. ಅಂಗನವಾಡಿಗಳ ಕುರಿತ ತಪ್ಪು ಕಲ್ಪನೆ ಸರಿಯಲ್ಲ. ತನ್ನ ಮಗ ಇತರೊಂದಿಗೆ ಹಂಚುವ, ಸಹಕರಿಸುವ ಅಭ್ಯಾಸ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಆ ರೀತಿಯ ವಾತಾವರಣವಿರುವಲ್ಲಿ ಸೇರಿಸಿವುದಾಗಿ ಸ್ವಾತಿ ಹೇಳಿದ್ದಾರೆ.
ಅಂಗನವಾಡಿಯಲ್ಲಿ ಇತರ ಮಕ್ಕಳ ಜೊತೆ ಆತ ಅಂಗನವಾಡಿಯನ್ನು ತಮ್ಮ ಮಗ ಬಹಳವಾಗಿ ಆನಂದಿಸುತ್ತಾನೆ. ಅಂಗನವಾಡಿಗಳ ಬಗ್ಗೆ ನಮಗಿರುವ ದೃಷ್ಟಿಕೋನ ಕೂಡಾ ಬದಲಾಗಬೇಕು ಎಂದು ಸ್ವಾತಿ ಹೇಳಿದ್ದಾರೆ. ಸ್ವಾತಿ ಪತಿ, ನಿತಿನ್ ಭಡೌರಿಯಾ ಕೂಡಾ ಐಎಎಸ್ ಅಧಿಕಾರಿಯಾಗಿದ್ದು, ಅಲ್ಮೋರಾ ಜಿಲ್ಲಾಧಿಕಾರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


