ದೇಶ

ಉಗ್ರ ಸಂಘಟನೆ ಸೇರಿದ ವಿದ್ಯಾರ್ಥಿ, 'ನಮ್ಮ ಮೇಲೆ ದಯೆತೋರಿ ಮನೆಗೆ ಬರಲು ಬಿಡಿ': ಉಗ್ರರಿಗೆ ಪೋಷಕರ ಮನವಿ

ಕಳೆದ ವಾರ ಗ್ರೇಟರ್​ ನೊಯ್ಡಾದ ಕಾಲೇಜುವೊಂದರಿಂದ ನಾಪತ್ತೆಯಾಗಿದ್ದ ಕಾಶ್ಮೀರದ ವಿದ್ಯಾರ್ಥಿ ಈಗ...

ಉಗ್ರ ಸಂಘಟನೆ ಸೇರಿದ ವಿದ್ಯಾರ್ಥಿ, 'ನಮ್ಮ ಮೇಲೆ ದಯೆತೋರಿ ಮನೆಗೆ ಬರಲು ಬಿಡಿ': ಉಗ್ರರಿಗೆ ಪೋಷಕರ ಮನವಿ
ಪೋಷಕರು
Published On :
ಶ್ರೀನಗರ: ಕಳೆದ ವಾರ ಗ್ರೇಟರ್​ ನೊಯ್ಡಾದ ಕಾಲೇಜುವೊಂದರಿಂದ ನಾಪತ್ತೆಯಾಗಿದ್ದ ಕಾಶ್ಮೀರದ ವಿದ್ಯಾರ್ಥಿ ಈಗ ಉಗ್ರ ಸಂಘಟನೆ ಸೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್​ ಉಗ್ರ ಸಂಘಟನೆ ಧ್ವಜ ಹಿಡಿದು ಪ್ರತ್ಯಕ್ಷನಾಗಿದ್ದಾನೆ.
17 ವರ್ಷದ ಶಾರದಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಹ್ತೆಶಮ್​ ಬಿಲಾಲ್​ ಸೋಫಿ ಉಗ್ರ ಸಂಘಟನೆ ಸೇರಿದ ವಿಷಯ ತಿಳಿದು ಆತನ ಪೋಷಕರು ಆಘಾತಗೊಂಡಿದ್ದು, ತಮ್ಮ ಮೇಲೆ ದಯೆ ತೋರಿ ಮಗನನ್ನು ವಾಪಸ್ ಮನೆಗೆ ಕಳುಹಿಸಿಕೊಡುವಂತೆ ಉಗ್ರರಿಗೆ ಮನವಿ ಮಾಡಿದ್ದಾರೆ.
ಅಹ್ತೆಶಮ್​ ಅವರ ತಂದೆ ಬಿಲಾಲ್ ಅಹಮ್ಮದ್ ಸೋಫಿ​ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದು, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಅಹ್ತೆಶಮ್ ನಮ್ಮ ಕುಟುಂಬದ ಒಬ್ಬನೆ ಗಂಡು ಮಗನಾಗಿದ್ದು, ಆತ ಮರಳಿ ಮನೆಗೆ ಬರಲು ಅವಕಾಶ ನೀಡುವಂತೆ ಬಿಲಾಲ್ ಅವರು ಉಗ್ರರ ಬಳಿ ಕೇಳಿಕೊಂಡಿದ್ದಾರೆ.
ಅಕ್ಟೋಬರ್ 28ರಂದು ದೆಹಲಿಗೆ ತೆರಳಬೇಕೆಂದು ಕಾಲೇಜಿನಿಂದ ಅನುಮತಿ ಪಡೆದು ತೆರಳಿದ್ದ ಅಹ್ತೆಶಮ್ ಅಂದಿನಿಂದ ನಾಪತ್ತೆಯಾಗಿದ್ದ. 
ಒಂದು ವಾರದ ನಂತರ ಅಹ್ತೆಶಮ್ ಬಿಲಾಲ್​ ಫೇಸ್​ಬುಕ್​ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪು ಬಣ್ಣದ ಉಗ್ರನ ಧಿರಿಸಿನಲ್ಲಿ ಐಸಿಸ್​ ಧ್ವಜ ಹಿಡಿದು ನಿಂತುಕೊಂಡ ಭಂಗಿಯಲ್ಲಿ ಕಾಣಿಸಿಕೊಂಡಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.