ದೇಶ

ಏರ್ಸೆಲ್-ಮಾರ್ಕ್ಸಿಸ್ ಪ್ರಕರಣ: ಕೇಂದ್ರ ಮಾಜಿ ಸಚಿವ ಪಿ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ...

ಏರ್ಸೆಲ್-ಮಾರ್ಕ್ಸಿಸ್ ಪ್ರಕರಣ: ಕೇಂದ್ರ ಮಾಜಿ ಸಚಿವ ಪಿ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಪಿ ಚಿದಂಬರಂ
Published On :
ನವದೆಹಲಿ: ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂಗೆ ಸಂಕಷ್ಟ ಎದುರಾಗಿದ್ದು ಈ ಸಂಬಂಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಚಿದಂಬಂರಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ಜೂನ್ 5ರವರೆಗೆ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆ ಜೂನ್ 5ಕ್ಕೆ ಮುಂದೂಡಿದ್ದು ಅಂದು ಕೋರ್ಟ್ ಮುಂದೆ ಚಿದಂಬರಂ ಅವರನ್ನು ಹಾಜರುಪಡಿಸುವಂತೆ ಜಾರಿ ನಿರ್ದೇಶನಾಲಯಗೆ ಕೋರ್ಟ್ ಸೂಚಿಸಿದೆ. 
ಏರ್ ಸೆಲ್ ಸಂಸ್ಥೆ 2006ರಲ್ಲಿ 3,500 ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆ(ಎಫ್​ಡಿಐ)ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರುಪಾಯಿ ಎಫ್​ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ ಸಿಸಿಇಎಗೆ ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು. 
ಅಂದಿನ ನಿಯಮಾನುಸಾರ 600 ಕೋಟಿ ರುಪಾಯಿ ತನಕದ ಎಫ್​ಡಿಐಗೆ ಹಣಕಾಸು ಸಚಿವಾಲಯ ಎಫ್ಐಪಿಬಿ ಮೂಲಕ ಅನುಮತಿಸುವುದಕ್ಕೆ ಅಧಿಕಾರವಿತ್ತು. ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿಗೆ ಏರ್ ಸೆಲ್ ಕಂಪನಿ 26 ಲಕ್ಷ ರುಪಾಯಿಯನ್ನು ಪಾವತಿಸಿತ್ತು. ಈ ಪ್ರಕರಣವೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.