ದೇಶ

ಕೇಂದ್ರ ಸಚಿವರಿಂದ 'ವೈಯಕ್ತಿಕ ಟಾರ್ಗೆಟ್': ಒಡಿಶಾ ಐಎಎಸ್ ಅಧಿಕಾರಿಗಳ ಸಂಘ ಆರೋಪ

ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹಿರಿಯ ಅಧಿಕಾರಿಗಳನ್ನು 'ವೈಯಕ್ತಿಕ ಟಾರ್ಗೆಟ್' ಮಾಡುತ್ತಿದ್ದಾರೆ....

ಕೇಂದ್ರ ಸಚಿವರಿಂದ 'ವೈಯಕ್ತಿಕ ಟಾರ್ಗೆಟ್': ಒಡಿಶಾ ಐಎಎಸ್ ಅಧಿಕಾರಿಗಳ ಸಂಘ ಆರೋಪ
ಧರ್ಮೇಂದ್ರ ಪ್ರಧಾನ್
Published On :
ನವದೆಹಲಿ: ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹಿರಿಯ ಅಧಿಕಾರಿಗಳನ್ನು 'ವೈಯಕ್ತಿಕ ಟಾರ್ಗೆಟ್' ಮಾಡುತ್ತಿದ್ದಾರೆ ಎಂದು ಒಡಿಶಾ ಐಎಎಸ್ ಅಧಿಕಾರಿಗಳ ಸಂಘ ಮಂಗಳವಾರ ಆರೋಪಿಸಿದೆ.
ಈ ಸಂಬಂಧ ಐಎಎಸ್ ಅಧಿಕಾರಿಗಳ ಸಂಘ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಮನವಿ ಸಲ್ಲಿಸಿದ್ದು, ಘಟನೆ ಮತ್ತೆ ಮರುಕಳುಹಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದೆ.
ಇತ್ತೀಚಿಗೆ ರಾಜ್ಯ ಮತ್ತು ದೇಶದ ಇತರೆ ಭಾಗಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೇಲೆ ರಾಜಕಾರಣಿಗಳು ವೈಯಕ್ತಿಕ ದಾಳಿ ನಡೆಸುವ ಮೂಲಕ ಸಂವಿಧಾನಿಕ ಮೌಲ್ಯಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ಆರೋಪಿಸಿದೆ.
ಉದಾಹರಣೆಗೆ, ಮೇ 28ರಂದು ಭುವನೇಶ್ವರದಲ್ಲಿ ಎನ್ಐಸಿ ರಾಷ್ಟ್ರೀಯ ದತ್ತಾಂಶ ಕೇಂದ್ರ ಉದ್ಘಾಟನೆ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದರು ಎಂದು ಸಂಘ ದೂರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.