ದೇಶ

ವಿದೇಶದಲ್ಲಿ ಇದ್ದರೂ ಮನರಂಜನೆ ನೀಡಿ: ರಾಹುಲ್ ಕಾಲೆಳೆದ ಬಿಜೆಪಿ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ತಾಯಿ ಜತೆ ವಿದೇಶಕ್ಕೆ ತೆರಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...

ವಿದೇಶದಲ್ಲಿ ಇದ್ದರೂ ಮನರಂಜನೆ ನೀಡಿ: ರಾಹುಲ್ ಕಾಲೆಳೆದ ಬಿಜೆಪಿ
ರಾಹುಲ್ ಗಾಂಧಿ
Published On :
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ತಾಯಿ ಜತೆ ವಿದೇಶಕ್ಕೆ ತೆರಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಷಿಯಲ್ ಮೀಡಿಯಾದ ಬಿಜೆಪಿ ಟ್ರೋಲ್ ಸ್ನೇಹಿತರೇ ನಾನು ಭಾರತದಲ್ಲಿ ಇಲ್ಲವೆಂದು ತುಬಾ ಕೆಲಸ ಮಾಡಬೇಡಿ ನಾನು ಶೀಘ್ರದಲ್ಲಿಯೇ ಹಿಂತಿರುಗುತ್ತೇನೆ ಎಂದು ಕಿಚಾಯಿಸಿದ್ದರು.
ರಾಹುಲ್ ಗಾಂಧಿ ಟ್ವೀಟ್ ಗೆ ಟಾಂಗ್ ಕೊಟ್ಟಿರುವ ಬಿಜೆಪಿ, ನಾವು ಸೋನಿಯಾ ಗಾಂಧಿ ಅರೋಗ್ಯ ಚೆನ್ನಾಗಿರಲೆಂದು ಬಯಸುತ್ತೇವೆ. ಅದೇ ರೀತಿ ಕರ್ನಾಟದ ಹೆಣ್ಣು ಮಕ್ಕಳು ಸಂಪುಟ ರಚನೆಯನ್ನು ಎದುರು ನೋಡುತ್ತಿದ್ದು ಅವರಿಗೆ ರಾಜ್ಯ ಸರ್ಕಾರದ ಸೇವೆ ಆರಂಭಿಸಲಿದೆಯೇ. ನೀವು ವಿದೇಶಕ್ಕೆ ಹೊರಡುವ ಮುನ್ನವೇ ಸರ್ಕಾರ ಕಾರ್ಯಗತವಾಗಲಿದೆ ಎಂದು ನೀವು ಅಭಯ ನೀಡುವಿರಾ ಎಂದು ಟ್ವೀಟ್ ಮಾಡಿದೆ. 
ಇದೇ ವೇಳೆ ನೀವು ವಿದೇಶದಲ್ಲಿದ್ದರೂ ಅಲ್ಲಿಂದಲೇ ನಮಗೆ ಮನೋರಂಜನೆ ಒದಗಿಸುವಿರೆಂದು ನಾವು ಹಾರೈಸುತ್ತೇವೆ ಎಂದು ಬಿಜೆಪಿ ರಾಹುಲ್ ಗಾಂಧಿ ಕಾಲೆಳೆದಿದೆ.
2011ರಲ್ಲಿ ಸೋನಿಯಾ ಗಾಂಧಿ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದೀಗ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದು ವಾರದ ನಂತರ ರಾಹುಲ್ ಗಾಂಧಿ ಭಾರತಕ್ಕೆ ಮರಳಬಹುದು. ಆದರೆ ಸೋನಿಯಾ ಅವರು ಮಾತ್ರ ಹೆಚ್ಚಿನ ದಿನ ವಿದೇಶದಲ್ಲೇ ಕಳೆಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.