ಕೆಲ ಸಂಶೋಧಕರು ಇತಿಹಾಸ ಪುನಃ ಬರೆಯಲು ಯತ್ನಿಸುತ್ತಿದ್ದಾರೆ: ಹಮೀದ್ ಅನ್ಸಾರಿ
ಕೆಲವು ಸಂಶೋಧಕರು ಇತಿಹಾಸವನ್ನು ಪುನಃ ಬರೆಯಲು ಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು...

Published On :
ನವದೆಹಲಿ: ಕೆಲವು ಸಂಶೋಧಕರು ಇತಿಹಾಸವನ್ನು ಪುನಃ ಬರೆಯಲು ಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಭಾನುವಾರ ಹೇಳಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ಸಾರಿ, ದೀರ್ಘಕಾಲದ ಹಿಂದೆಯೇ, 'ಟೈಮ್ ಮಷಿನ್' ಎಂಬ ಶೀರ್ಷಿಕೆಯ ಪುಸ್ತಕ ಬರೆಯಲಾಗಿದೆ. ತಂತ್ರಜ್ಞಾನದ ಪರಿಕಲ್ಪನೆ ಮತ್ತು ಹಿಂದೆ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಒಂದು ಅತ್ಯುತ್ತಮ ಪುಸ್ತಕವಾಗಿದೆ ಎಂದರು.
ಈಗ ಕೆಲ ಸಂಶೋಧರು. ಅವರು ಬರಹಗಾರರಲ್ಲ. ಇತಿಹಾಸವನ್ನು ಪುನಃ ಬರೆಯಲು ಯತ್ನಿಸುತ್ತಿದ್ದಾರೆ. ಆದರೆ ಅಂತಹ ಪ್ರಯತ್ನ ಫಲ ನೀಡುವುದಿಲ್ಲ ಎಂದು ಮಾಜಿ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
ಇತಿಹಾಸ, ಇತಿಹಾಸವೇ. ಅದನ್ನು ಓದಬೇಕು ಮತ್ತು ಅದರಿಂದ ಪಾಠ ಕಲಿಯಬೇಕು ಅಥವಾ ಕಾಲೇಜ್ ಗಳಲ್ಲಿ ಪರೀಕ್ಷೆಗಾಗಿ ಓದಿಕೊಳ್ಳಬೇಕು. ಆದರೆ ಅದನ್ನು ಬದಲಿಸುವ ಯತ್ನ ಮಾಡಬಾರದು ಎಂದು ಅನ್ಸಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹಮೀದ್ ಅನ್ಸಾರಿHamid AnsariSome inventorstrying to \'rewrite\' historyಕೆಲ ಸಂಶೋಧಕರುಇತಿಹಾಸ ಪುನಃ ಬರೆಯುವುದು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


