ದೇಶ

ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ನಿರುದ್ಯೋಗಿ ಇಂಜಿನಿಯರ್!

ನಿರುದ್ಯೋಗಿ ಇಂಜಿನಿಯರ್ ತನ್ನ ಪತ್ನಿ ಹಾಗೂ ಪುತ್ರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ನಿರುದ್ಯೋಗಿ ಇಂಜಿನಿಯರ್!
ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ನಿರುದ್ಯೋಗಿ ಇಂಜಿನಿಯರ್!
Published On :
ಮೈಸೂರು: ನಿರುದ್ಯೋಗಿ ಇಂಜಿನಿಯರ್ ತನ್ನ ಪತ್ನಿ ಹಾಗೂ ಪುತ್ರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. 
ಆರ್ ಪ್ರಜ್ವಲ್(40) ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಸವಿತ (38)  ಹಾಗೂ 11 ವರ್ಷದ ಮಗುವನ್ನು ಹತ್ಯೆ ಮಾಡಿದ್ದಾನೆ. ಡಿಸೈನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಜ್ವಲ್ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನೌಕರಿಯನ್ನು ತ್ಯಜಿಸಿದ್ದರು. ನಂತರದ ದಿನಗಳಲ್ಲಿ ಆಸ್ತಿ ವಿವಾದ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ಪ್ರಜ್ವಲ್ ಮದ್ಯವ್ಯಸನಿಯಾಗಿದ್ದರು.  ಇದರಿಂದಾಗಿ ಕುಟುಂಬದಲ್ಲಿ ಶಾಂತಿಯೂ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿ ತಾನೂ ಕತ್ತು ಸೀಳಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ. 
ತಾನು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸಹಾಯಕ್ಕಾಗಿ ತಂದೆಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾನು ಪತ್ನಿ ಹಾಗೂ ಮಗುವನ್ನು ಹತ್ಯೆ ಮಾಡಿರುವ ಬಗ್ಗೆಯೂ ಹೇಳಿದ್ದಾನೆ. ತಕ್ಷಣವೇ ಪ್ರಜ್ವಲ್ ತಂದೆ ರಾಮಚಂದ್ರ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಜ್ವಲ್ ನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  
ಕೆಲಸ ಮಾಡುತ್ತಿದ್ದ ಸಂಸ್ಥೆ ಮುಚ್ಚಿದ ಹಿನ್ನೆಲೆಯಲ್ಲಿ ಪ್ರಜ್ವಲ್ ನಿರುದ್ಯೋಗಿಯಾಗಿದ್ದ, ಇದರಿಂದಾಗಿ ಸಾಕಷ್ಟು ಒತ್ತಡದಲ್ಲಿದ್ದ ಪ್ರಜ್ವಲ್ ಗೆ ಮೈಸೂರಿನಲ್ಲಿ ಮನೆ ಖರೀದಿಸಲು  ಬಿಇಎಲ್ ನ ನಿವೃತ್ತ ಅಧಿಕಾರಿಯಾಗಿದ್ದ ತಂದೆ  ರಾಮಚಂದ್ರ ಸಹಾಯ ಮಾಡಿದ್ದರು.  ಅಷ್ಟೇ ಅಲ್ಲದೇ ಪ್ರತಿ ತಿಂಗಳೂ ಹಣದ ಸಹಾಯ ಮಾಡುತ್ತಿದ್ದರು. 
ಮನೆಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವಂತೆ ಪತ್ನಿ ಪೀಡಿಸುತ್ತಿದ್ದಳು ಎಂದು ಪ್ರಜ್ವಲ್ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.