ದೇಶ

ಸಿಬಿಎಸ್ ಇ 12 ನೇ ತರಗತಿ ಫಲಿತಾಂಶ ಪ್ರಕಟ : ಆನ್ ಲೈನ್, ಎಸ್ ಎಂಎಸ್, ಮೂಲಕವೂ ಅಂಕ ಪರೀಕ್ಷಿಸಬಹುದು

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ ) 12 ನೇ ತರಗತಿಯ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಸಿಬಿಎಸ್ ಇ 12 ನೇ ತರಗತಿ ಫಲಿತಾಂಶ ಪ್ರಕಟ : ಆನ್ ಲೈನ್, ಎಸ್ ಎಂಎಸ್, ಮೂಲಕವೂ ಅಂಕ ಪರೀಕ್ಷಿಸಬಹುದು
ಸಾಂದರ್ಭಿಕ ಚಿತ್ರ
Published On :

ನವದೆಹಲಿ : ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ ) 12 ನೇ ತರಗತಿಯ ಪರೀಕ್ಷಾ ಫಲಿತಾಂಶ  ಇಂದು ಪ್ರಕಟಗೊಂಡಿದೆ.

ಈ ಬಾರಿ ಒಟ್ಟಾರೇ  ಶೇ. 83. 01 ರಷ್ಟು  ವಿದ್ಯಾರ್ಥಿಗಳು ತೇಗರ್ಡೆ ಹೊಂದಿದ್ದಾರೆ. ವಲಯವಾರು ವಿಭಾಗದಲ್ಲಿ  ತ್ರಿವೇಂದ್ರಮ್  (ಶೇ. 97.32 )  ಚೆನ್ನೈ ( ಶೇ. 93. 8 )  ಮತ್ತು ದೆಹಲಿ ಶೇ. 89 ರಷ್ಟು ಸಾಧನೆ ಮಾಡಿವೆ. ಗಾಜಿಯಾಬಾದ್ ನ ಮೇಘನಾ ಶ್ರೀವಾಸ್ತವ  500 ಅಂಕಕ್ಕೆ 499 ಅಂಕ ಪಡೆದು ಟಾಪರ್  ಆಗಿ ಹೊರ ಹೊಮ್ಮಿದ್ದಾಳೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲ್ಲಿ ನೋಡಬಹುದು. cbse.nic.in, cbseresults.nic.in, results.nic.in, cbse.examresults.net and results.gov.in.
ಫಲಿತಾಂಶದ ಬಗ್ಗೆಗಿನ ವಿದ್ಯಾರ್ಥಿಗಳಲ್ಲಿನ ಭೀತಿಯನ್ನು ಹೋಗಲಾಡಿಸುವ ಸಲುವಾಗಿ ಬೋರ್ಡ್ ವತಿಯಿಂದ ಟೆಲಿ ಕೌನ್ಸಲಿಂಗ್  ಸರ್ವಿಸ್ ಕೇಂದ್ರಗಳನ್ನು  ತೆರೆಯಲಾಗಿದೆ. 1800 11 8004 ಮೂಲಕ  ಸಹಾಯವಾಣಿ ಸಂಪರ್ಕಿಸಬಹುದು
ಎಲ್ಲಾ ದಿನಗಳಲ್ಲೂ ಇದು  ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೂ ದೇಶದ ಯಾವುದೇ ಕಡೆಯಿಂದಲೂ  ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.