'ಖತರ್ನಾಕ್ ಉಗ್ರರು'; ಗಡಿ ದಾಟಲು ಬಳಸಿರುವ ಸಾಧನವೇನು ನೋಡಿ!
ಭಾರತದ ಗಡಿಯೊಳಗೆ ನುಸುಳಲು ಉಗ್ರರು ನಾನಾ ತಂತ್ರಗಾರಿಕೆಗಳನ್ನು ಹೂಡುತ್ತಿದ್ದು, ಈ ಎಲ್ಲ ಕುತಂತ್ರಗಳನ್ನೂ ಭಾರತೀಯ ಸೇನೆ ವಿಫಲಗೊಳಿಸುತ್ತಿದೆ.

Published On :
ಶ್ರೀನಗರ: ಭಾರತದ ಗಡಿಯೊಳಗೆ ನುಸುಳಲು ಉಗ್ರರು ನಾನಾ ತಂತ್ರಗಾರಿಕೆಗಳನ್ನು ಹೂಡುತ್ತಿದ್ದು, ಈ ಎಲ್ಲ ಕುತಂತ್ರಗಳನ್ನೂ ಭಾರತೀಯ ಸೇನೆ ವಿಫಲಗೊಳಿಸುತ್ತಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರು ಸ್ಮಾರ್ಟ್ ತಂತ್ರಜ್ಞಾನದ ಮೂಲಕ ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನವನ್ನು ಸೇನೆ ತಡೆದಿದೆ. ಅಲ್ಲದೆ ಉಗ್ರರು ತಂದಿದ್ದ ಸ್ಮಾರ್ಟ್ ಏಣಿಯನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕೆರನ್ ಪ್ರದೇಶದಿಂದ ದೇಶದೊಳಗೆ ನುಗ್ಗಲು ಯತ್ನಿಸಿದ ಉಗ್ರರನ್ನು ರಕ್ಷಣಾ ಪಡೆಗಳು ಹಿಮ್ಮೆಟ್ಟಿಸಿದ್ದು, ಈ ಸಮಯದಲ್ಲಿ ನಡೆದ ಗುಂಡಿನ ಚಕಮಕಿಗೆ ಹೆದರಿ ಉಗ್ರರು ತಮ್ಮ ಹಲವು ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅವುಗಳಲ್ಲಿ ಮಡಚಬಹುದಾದ ಸ್ಮಾರ್ಟ್ ಏಣಿಯೊಂದು ಸಿಕ್ಕಿದೆ. ಈ ಏಣಿ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಈ ವಿಶಿಷ್ಠ ಏಣಿಯನ್ನು ಮಡಚಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮತ್ತೊಂದೆಡೆಗೆ ಒಯ್ಯಬಹುದಾಗಿದ್ದು, ಇಂತಹ ಏಣಿಗಳು ಸರಿಸುಮಾರು 15ರಿಂದ 20 ಅಡಿ ಉದ್ದವಿದೆ ಎನ್ನಲಾಗಿದೆ. ಕಡಿಮೆ ತೂಕ, ಗಟ್ಟಿಮುಟ್ಟಾದ ಇವುಗಳನ್ನು ಗುಪ್ತವಾಗಿ ನುಸುಳಲು ಉಗ್ರರು ಬಳಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ ಸಣ್ಣ ಹಳ್ಳ, ಗೋಡೆಗಳನ್ನು ದಾಟಲು, ಸಣ್ಣ ಬೆಟ್ಟಗಳನ್ನು ಬೇಗ ಹತ್ತಿ ಬಂದು ದಾಳಿ ನಡೆಸಿ ತ್ವರಿತವಾಗಿ ತಪ್ಪಿಸಿಕೊಳ್ಳಲು ಉಗ್ರರಿಗೆ ಇವುಗಳ ನೆರವು ಪಡೆಯುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಉಗ್ರರುಶ್ರೀನಗರSrinagarterroristsಜಮ್ಮು ಮತ್ತು ಕಾಶ್ಮೀರJammu and Kashmirಭಾರತೀಯ ಸೇನೆSmart Ladderಸ್ಮಾರ್ಟ್ ಏಣಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


