ಫೇಸ್ ಬುಕ್ ಗೆಳತಿಗಾಗಿ ಹೆತ್ತವರನ್ನೇ ಹತ್ಯೆ ಮಾಡಿದ!
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡುವುದಕ್ಕೆ ನಿರಾಕರಿಸಿದ ಪೋಷಕರನ್ನು ದೆಹಲಿಯ 26 ವರ್ಷದ ಯುವಕ ಹತ್ಯೆ ಮಾಡಿದ್ದಾನೆ.

Published On :
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡುವುದಕ್ಕೆ ನಿರಾಕರಿಸಿದ ಪೋಷಕರನ್ನು ದೆಹಲಿಯ 26 ವರ್ಷದ ಯುವಕ ಹತ್ಯೆ ಮಾಡಿದ್ದಾನೆ.
ದೆಹಲಿಯ ಆಗ್ನೇಯ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಅಬ್ದುಲ್ ರೆಹಮಾನ್ ತನ್ನ ಪೋಷಕರನ್ನು ಹತ್ಯೆ ಮಾಡಿದವನಾಗಿದ್ದಾನೆ. ಖಾನ್ ಪುರದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಅಬ್ದುಲ್ ರೆಹಮಾನ್ ಪೋಷಕರ ಸುಪರ್ದಿನಲ್ಲಿದ್ದ ಆಸ್ತಿಯನ್ನು ಪಡೆಯಲು ಪೋಷಕರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರೆಹಮಾನ್ ಗೆ ಈಗಾಗಲೇ ಒಂದು ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಾನೆ, ಈ ಘಟನೆಯ ಬಳಿಕ ಫೇಸ್ ಬುಕ್ ನಲ್ಲಿ ಮಹಿಳೆಯೊಬ್ಬರು ಪರಿಚಯವಾಗಿದ್ದಾಳೆ. ಈ ನಡುವೆ 2017 ರಲ್ಲಿ ಪೋಷಕರ ಇಚ್ಛೆಯಂತೆ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ. ಆದರೆ ಫೇಸ್ ಬುಕ್ ಗೆಳತಿಯೊಂದಿಗೆ ವಿವಾಹೇತರ ಸಂಬಂಧ ಮಾತ್ರ ಮುಂದುವರೆದಿದ್ದು ಆಕೆಯನ್ನೂ ವಿವಾಹವಾಗುವುದಾಗಿ ಭರವಸೆ ನೀಡಿದ್ದಾನೆ.
ಪೋಷಕರ ಬಳಿಯೂ ಫೇಸ್ ಬುಕ್ ಗೆಳತಿಯ ಬಗ್ಗೆ ತಿಳಿಸಿದ್ದ ರೆಹಮಾನ್, ಆಕೆಯನ್ನೂ ವಿವಾಹವಾಗುತ್ತೇನೆ ಎಂದು ಪಟ್ಟಿ ಹಿಡಿದಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಪೋಷಕರನ್ನು ಹತ್ಯೆ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


