ದೇಶ

ಪ್ರಧಾನಿ ಮೋದಿ ಎದುರಿಸಲು ಮನಮೋಹನ್ ಸಿಂಗ್ ಸಮರ್ಥ ವ್ಯಕ್ತಿ: ಪ್ರಕಾಶ್ ಅಂಬೇಡ್ಕರ್

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರಿಗೆ ವಿರೋಧ ವ್ಯಕ್ತಪಡಿಸಿರುವ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು...

ಪ್ರಧಾನಿ ಮೋದಿ ಎದುರಿಸಲು ಮನಮೋಹನ್ ಸಿಂಗ್ ಸಮರ್ಥ ವ್ಯಕ್ತಿ: ಪ್ರಕಾಶ್ ಅಂಬೇಡ್ಕರ್
ಪ್ರಕಾಶ್ ಅಂಬೇಡ್ಕರ್
Published On :
ಮುಂಬೈ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರಿಗೆ ವಿರೋಧ ವ್ಯಕ್ತಪಡಿಸಿರುವ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಎದುರಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಸೂಕ್ತ ವ್ಯಕ್ತಿ ಎಂದು ಸೋಮವಾರ ಹೇಳಿದ್ದಾರೆ.
ಇಂದು ಪಂಡರಾಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಅವರು, ಕರ್ನಾಟಕದಲ್ಲಿ ಕಾಲುಭಾಗ ಅಧಿಕಾರ ಕಳೆದುಕೊಳ್ಳಲಾಗಿದೆ. ಉಳಿದ ದೇಶ ಪ್ರಧಾನಿ ಮೋದಿಯ ಹಿಡಿತದಲ್ಲಿದೆ. ಈಗ ಮೋದಿಯನ್ನು ಸಮರ್ಥವಾಗಿ ಎದುರಿಸಲು ಮನಮೋಹನ್ ಸಿಂಗ್ ಅವರೇ ಸೂಕ್ತ ವ್ಯಕ್ತಿ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇನ್ನು ಹೆಚ್ಚು ರಾಜಕೀಯದ ಅನುಭವ ಬೇಕು. ಆದರೆ ಪ್ರಧಾನಿ ಮೋದಿಯ ಸುಳ್ಳು ಪ್ರಚಾರವನ್ನು ಮಾಜಿ ಪ್ರಧಾನಿ ಯಶಸ್ವಿಯಾಗಿ ವಿರೋಧಿಸಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ಅಂಬೇಡ್ಕರ್ ಅವರು, ಬಿಜೆಪಿ ತನ್ನ ಗುರಿ ಸಾಧಿಸಲು ಎಂತಹ ಕೆಳಮಟ್ಟಕ್ಕೂ ಇಳಿಯುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.