ದೇಶ

ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ರಾಜಧಾನಿ ಎಕ್ಸ್'ಪ್ರೆಸ್'ನ ನಾಲ್ಕು ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೋಗಿಗಳು ಹೊತ್ತು ಉರಿದಿರುವ ಘಟನೆ ಮಧ್ಯಪ್ರದೇಶ ಬಿರ್ಲಾನಗರದಲ್ಲಿ ಸೋಮವಾರ ನಡೆದಿದೆ...

ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
Published On :
ಗ್ವಾಲಿಯರ್: ರಾಜಧಾನಿ ಎಕ್ಸ್'ಪ್ರೆಸ್'ನ ನಾಲ್ಕು ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೋಗಿಗಳು ಹೊತ್ತು ಉರಿದಿರುವ ಘಟನೆ ಮಧ್ಯಪ್ರದೇಶ ಬಿರ್ಲಾನಗರದಲ್ಲಿ ಸೋಮವಾರ ನಡೆದಿದೆ. 
ಭೋಪಾಲ್-ರಾಜಧಾನಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ವಿಶಾಖಪಟ್ಟಣದತ್ತ ಸಾಗುತ್ತಿದ್ದು. ಈ ವೇಳೆ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. 
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 
ರೈಲಿನ ಬಿ-6. ಬಿ-7 ಬೋಗಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.