ಮತ್ತೆ ಗಡಿಯಲ್ಲಿ ಪಾಕ್ ಪುಂಡಾಟ; ಅಪ್ರಚೋದಿತ ಗುಂಡಿನ ಗಾಳಿಗೆ ಓರ್ವ ಯೋಧನಿಗೆ ಗಾಯ
ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದ ಬಳಿಕ ಶಾಂತಿ ಸ್ಥಾಪನೆಗೆ ಬದ್ಧ ಎಂದು ಹೇಳಿದ್ದ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದ್ದು, ಗಡಿಯಲ್ಲಿ ತನ್ತ ಪುಂಡಾಟವನ್ನು ಮುಂದುವರೆಸಿದೆ...

Published On :
ಜಮ್ಮು; ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದ ಬಳಿಕ ಶಾಂತಿ ಸ್ಥಾಪನೆಗೆ ಬದ್ಧ ಎಂದು ಹೇಳಿದ್ದ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದ್ದು, ಗಡಿಯಲ್ಲಿ ತನ್ತ ಪುಂಡಾಟವನ್ನು ಮುಂದುವರೆಸಿದೆ.
ಜಮ್ಮುವಿನ ಆರ್'ಎಸ್ ಪುರ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಈವೇಳೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಆರ್'ಎಸ್ ಪುರ ಸೆಕ್ಟರ್ ಬಳಿಯಿರುವ ಪೊಲೀಸ್ ಠಾಣೆ ಮೇಲೆ ಮಾರ್ಟರ್ ಶೆಟ್ ಗಳ ದಾಳಿ ನಡೆಸಲಾಗಿದ್ದು, ಈ ವೇಳೆ ಯೋಧರೊಬ್ಬರಿಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
ರಂಜಾನ್ ತಿಂಗಳಾದ ಹಿನ್ನಲೆಯಲ್ಲಿ ಕದನ ವಿರಾಮಕ್ಕೆ ಭಾರತ ಕರೆ ನೀಡಿತ್ತು. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಪಾಕಿಸ್ತಾನ, ಗಡಿಯಲ್ಲಿ ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿನ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಹಲವು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದರು.
ಪಾಕಿಸ್ತಾನ ತನ್ನ ದುರ್ನಡತೆ ಪ್ರದರ್ಶಿಸಿದ್ದ ಹಿನ್ನಲೆಯಲ್ಲಿ ಮೇ.19 ರಂದು ಭಾರತೀಯ ಸೇನೆ ತಕ್ಕ ಪಾಠವನ್ನು ಕಲಿಸಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ ಸೇನೆ 4 ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಹೆದರಿದ ಪಾಕಿಸ್ತಾನ ಸೇನೆ, ಶಾಂತಿ ಕಾಪಾಡಲು ಬದ್ಧವಾಗಿದ್ದೇವೆಂದು ತಿಳಿಸಿತ್ತು. ಇದೀಗ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಲು ಪಾಕಿಸ್ತಾನ ಆರಂಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyPakistanಪಾಕಿಸ್ತಾನಜಮ್ಮು ಮತ್ತು ಕಾಶ್ಮೀರJammu and Kashmirಭಾರತೀಯ ಸೇನೆRS PuraPoliceman injuredಆರ್\'ಎಸ್.ಪುರಪೊಲೀಸ್ ಗಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


