ಕೇರಳ: ಕೋಯಿಕ್ಕೋಡ್ ನಲ್ಲಿ ನಿಗೂಢ ವೈರಾಣು ಸೋಂಕಿಗೆ ತುತ್ತಾದ 8 ಜನರ ಸ್ಥಿತಿ ಗಂಭೀರ
ಕೇರಳದಲ್ಲಿ ಒಂದೇ ಕುಟುಂಬದ 3 ಜನರು ನಿಗೂಢ ವೈರಾಣು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದ ಆರೋಗ್ಯ ಇಲಾಖೆ ಸೋಂಕಿನ ಲಕ್ಷಣಗಳನ್ನು ಹೊಂದಿದ 25 ಜನರನ್ನು ವೀಕ್ಷಣೆಯಲ್ಲಿಟ್ಟಿದೆ.

Published On :
ಕೋಯಿಕ್ಕೋಡ್: ಕೇರಳದಲ್ಲಿ ಒಂದೇ ಕುಟುಂಬದ 3 ಜನರು ನಿಗೂಢ ವೈರಾಣು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದ ಆರೋಗ್ಯ ಇಲಾಖೆ ಸೋಂಕಿನ ಲಕ್ಷಣಗಳನ್ನು ಹೊಂದಿದ 25 ಜನರನ್ನು ವೀಕ್ಷಣೆಯಲ್ಲಿಟ್ಟಿದೆ.
25 ಜನರು ಪೆರಾಂಬ್ರಾ ಮೂಲದವರಾಗಿದ್ದು, ಈ ನಿಗೂಢ ವೈರಾಣು ಸೋಂಕಿಗೆ ಮತ್ತಿಬ್ಬರು ತುತ್ತಾಗಿರುವುದರ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಓರ್ವ ಈಗಾಗಲೇ 3 ಜನರು ಮೃತಪಟ್ಟಿರುವ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಈತನ ಪರಿಸ್ಥಿತಿ ಗಂಭೀರವಾಗಿದ್ದು ಕೋಯಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಿತ್ರ ವೈರಾಣುವಿನ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಮ್ ನ್ನು ಸ್ಥಾಪಿಸಲಾಗಿದ್ದು ತುರ್ತು ಅಗತ್ಯವಿದ್ದಲ್ಲಿ (0495 2376063) ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


