ವಿಶ್ವದಾಖಲೆಯ ಪರ್ಯಟನೆ ಮುಕ್ತಾಯ, ಗೋವಾಗೆ ಮರಳಿದ ನೌಕಾಪಡೆ ವೀರ ಮಹಿಳೆಯರು
ಎಂಟು ತಿಂಗಳ ವಿಶ್ವ ಪರ್ಯಟಣೆ ಬಳಿಕ ಭಾರತೀಯ ನೌಕಾಪಡೆಯ ಎಲ್ಲಾ ಮಹಿಳಾ ಸಿಬ್ಬಂದಿಗೋವಾಗೆ ಮರಳಿದ್ದಾರೆ

Published On :
ಪಣಜಿ: ಎಂಟು ತಿಂಗಳ ವಿಶ್ವ ಪರ್ಯಟಣೆ ಬಳಿಕ ಐಎನ್‍ಎಸ್‍ವಿ ತಾರಿಣಿ ನೌಕೆಯಲ್ಲಿ ವಿಶ್ವ ಪರ್ಯಟನೆ ಕೈಗೊಂಡಿದ್ದ ಭಾರತೀಯ ನೌಕಾಪಡೆಯ ಎಲ್ಲಾ ಮಹಿಳಾ ಸಿಬ್ಬಂದಿಗೋವಾಗೆ ಮರಳಿದ್ದಾರೆ.
ಭಾರತೀಯ ನೌಕಾಪಡೆಯ ಮಹಿಳಾ ಸಿಬ್ಬಂದಿಗಳು ತಾವು ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮಹಿಳೆಯರೇ ಪಾಲ್ಗೊಂಡಿದ್ದ ಪ್ರಪ್ರಥಮ ವಿಶ್ವ ಪರ್ಯಟನೆ ಯಶಸ್ವಿಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಹಿಳಾ ಸಿಬ್ಬಂದಿಗಳ ಈ ಸಾಧನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಅನೇಕರು ಅಭಿನಂದನೆ ಸೂಚಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 10ರಂದು ಸ್ವದೇಶಿ ನಿರ್ಮಿತ ತಾರಣಿ ನೌಕೆಯಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಈ ತಂಡದ ನೇತೃತ್ವವನ್ನು ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ವಾರ್ಟಿಕಾ ಜೋಷ ವಹಿಸಿಕೊಂಡಿದ್ದರು.
ತಂಡವು ಒಟ್ಟಾರೆ 21,600 ನಾಟಿಕಲ್ ಮೈಲಿ ದೂರ ಪ್ರವಾಸ ಮಾಡಿ ಹಿಂತಿರುಗಿದ್ದು ತಮ್ಮ ಪ್ರವಾಸದ ನಡುವೆ ಅವರು ಐದು ದೇಶಗಳಿಗೆ ಭೇಟಿ ನೀಡಿದ್ದರು.
ಯಾತ್ರೆಯ ವೇಳೆ ಎರಡು ಬಾರಿ ಸಮಭಾಜಕ ವೃತ್ತವನ್ನು ದಾಟಿದ್ದ ಈ ಸಾಹಸಿ ತಂಡ ನಾಲ್ಕು ಖಂಡಗಳು ಮತ್ತು ಮೂರು ಮಹಾಸಾಗರಗಳನ್ನು ಸುತ್ತಿದೆ.
ನೌಕಾಯಾನದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳಾ ಸಿಬ್ಬಂದಿಗಳು ಮೇ 23 ರಂದು ದೆಹಲಿಗೆ ಆಗಮಿಸಲಿದ್ದು ಪ್ರಧಾನಮಂತ್ರಿಯಿಂದ ಸನ್ಮಾನಿತರಾಗಲಿದ್ದಾರೆ ಎಂದು ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ. ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
GoaಗೋವಾIndian Navyಭಾರತೀಯ ನೌಕಾಪಡೆINSV Tariniall-women Navy crewಐಎನ್‍ಎಸ್‍ವಿ ತಾರಿಣಿನೌಕಾಪಡೆಯ ಮಹಿಳಾ ಸಿಬ್ಬಂದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


