ದೇಶ

'ಬಾಲಗಂಗಾಧರ್ ತಿಲಕ್ ಭಯೋತ್ಪಾದನೆಯ ಪಿತಾಮಹ': ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಮಾನ

ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಪುಸ್ತಕದಲ್ಲಿ ಮುದ್ರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ....

'ಬಾಲಗಂಗಾಧರ್ ತಿಲಕ್ ಭಯೋತ್ಪಾದನೆಯ ಪಿತಾಮಹ': ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಮಾನ
ಮುಕ್ತ ತಿಲಕ್
Published On :
ಪುಣೆ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಪುಸ್ತಕದಲ್ಲಿ ಮುದ್ರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಪುಣೆ ಮೇಯರ್ ಮುಕ್ತ ತಿಲಕ್ ಹೇಳಿದ್ದಾರೆ.
8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ,ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆ. ತಂದೆ  ಮುದ್ರಿಸಲಾಗಿದೆ. ತಿಲಕ್ ಅವರು ದೇಶಕ್ಕಾಗಿ ಹೋರಾಡಿದ ಮಹಾನ್ ಪುರುಷರು, ಅವರನ್ನು ಈ ರೀತಿ ಬಿಂಬಿಸಿರುವುದು ಅವರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಮೊಮ್ಮಗ ಶೈಲೇಶ್ ತಿಲಕ್ ಅವರ ಪತ್ನಿಯಾಗಿರುವ ಮುಕ್ತ, ತಿಲಕ್ ಅವರು ಸುಮಾರು 50 ವರ್ಷ ದೇಶಕ್ಕಾಗಿ ಹೋರಾಡಿದ್ದಾರೆ, ದೇಶಕ್ಕಾಗಿ ಹೋರಾಟ ಮಾಡಿದ ಅವರನ್ನು ಭಯೋತ್ಪಾದಕ ಎಂದು  ಕರೆದಿರುವವರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ, ಜೊತೆಗೆ ಎಲ್ಲಾ ನಾಗರಿಕರು ಈ ಪುಸ್ತಕವನ್ನು ನಿಷೇಧಿಸಬೇಕು ಎಂದು ಕರೆ ನೀಡಿದ್ದಾರೆ.
ರಾಜಸ್ತಾನ ಪ್ರೌಢ ಶಿಕ್ಷಣ ಮಂಡಳಿ  ಈ ಪುಸ್ತಕ ಪ್ರಕಟಿಸಿದ್ದು,  ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಕ್ತ ತಿಲಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.