ದೇಶ

ಮಹಾರಾಷ್ಟ್ರ ಎಟಿಎಸ್‌ ಮಾಜಿ ಮುಖ್ಯಸ್ಥ ಹಿಮಾಂಶು ರಾಯ್‌ ಆತ್ಮಹತ್ಯೆ

ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ ಹಿಮಾಂಶು ರಾಯ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಾಣಾಗಿದ್ದಾರೆ.

ಮಹಾರಾಷ್ಟ್ರ ಎಟಿಎಸ್‌ ಮಾಜಿ ಮುಖ್ಯಸ್ಥ ಹಿಮಾಂಶು ರಾಯ್‌ ಆತ್ಮಹತ್ಯೆ
ಮಹಾರಾಷ್ಟ್ರ ಎಟಿಎಸ್‌ ಮಾಜಿ ಮುಖ್ಯಸ್ಥ ಹಿಮಾಂಶು ರಾಯ್‌ ಆತ್ಮಹತ್ಯೆ
Published On :
ಮುಂಬೈ: ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ  ಹಿಮಾಂಶು ರಾಯ್ ಮುಂಬೈನ  ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಾಣಾಗಿದ್ದಾರೆ.
ಹಿಮಾಂಶು ಅವರು ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.ಎನ್ನಲಾಗಿದೆ.
ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಯ್ 1988 ಮಹಾರಾಷ್ಟ್ರ ಕ್ಯಾಡರ್ ಆಗಿದ್ದಾರೆ. ಇವರು ಮುಂಬಯಿಯ ಸೇಂಟ್ ಕ್ಸೇವಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು.
2013ರ ಐಪಿಎಲ್ ಸರಣಿ ವೇಳೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ನಡೆದಿದ್ದು ಆ ಸಂದರ್ಭ ಬಾಲಿವುಡ್ ನ ವಿಂಧುಧರ ಸಿಂಗ್ ಬುಕ್ಕಿಗಳೊಡನೆ ಸಂಬಂಧ ಹೊಂದಿದ್ದ ಮಾಹಿತಿ ಪಡೆದಿದ್ದ ರಾಯ್ ಅವರನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.