ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆ ಶೀಘ್ರವೇ ಪ್ರಧಾನಿ ಮೋದಿಯಿಂದ ಉದ್ಘಾಟನೆ
ಅಸ್ಸಾಂ ನ ಡಿಬ್ರುಘರ್ ನಿಂದ ಅರುಣಾಚಲ ಪ್ರದೇಶದ ಪ್ಯಾಸಿಘಾಟ್ ಗೆ ಸಂಪರ್ಕ ಕಲ್ಪಿಸುವ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆಯನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

Published On :
ಬೋಗಿಬೀಲ್: ಅಸ್ಸಾಂ ನ ಡಿಬ್ರುಘರ್ ನಿಂದ ಅರುಣಾಚಲ ಪ್ರದೇಶದ ಪ್ಯಾಸಿಘಾಟ್ ಗೆ ಸಂಪರ್ಕ ಕಲ್ಪಿಸುವ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆಯನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಚೀನಾ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಚಟುವಟಿಕೆಗಳಿಗೆ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆ ಸಹಕಾರಿಯಾಗಲಿದ್ದು, ಜುಲೈ ವೇಳೆಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಸುಮಾರು 4.94 ಕಿಮೀಟರ್ ನಷ್ಟಿರುವ ಬೋಗಿಬೀಲ್ ರೈಲು ಹಾಗೂ ರಸ್ತೆ ಸೇತುವೆ ಎಂದೂ ಕರೆಯಲಾಗುವ ಸೇತುವೆಯನ್ನುವರ್ಷಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಏಷ್ಯಾದಲ್ಲೇ 2 ನೇ ಅತ್ಯಂತ ಉದ್ದದ ಸೇತುವೆ ಇದಾಗಿದ್ದು, ಬೃಹತ್ ಯೋಜನೆಗಾಗಿ ರೂ.950 ಕೋಟಿ ಖರ್ಚು ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸೇನೆಪಡೆ ರವಾನಿಸಲು ಈ ಸೇತುವೆ ಅನುಕೂಲಕರವಾಗಿರಲಿದೆ.
1996 ರಲ್ಲೇ ಈ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿತ್ತಾದರೂ 2002 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಕಾಮಗಾರಿ ಪ್ರಾರಂಭವಾಗಿತ್ತು. 2007 ರಲ್ಲಿ ಯುಪಿಎ ಸರ್ಕಾರ ಈ ಸೇತುವೆ ನಿರ್ಮಾಣ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರಧಾನಿ ನರೇಂದ್ರ ಮೋದಿಭಾರತPM ModiAssamArunachal Pradeshಅರುಣಾಚಲ ಪ್ರದೇಶIndia\'s longest road-rail bridgeಅತಿ ಉದ್ದದ ಸೇತುವೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


