ಖ್ಯಾತ ಗಾಯಕ ಅದ್ನಾನ್ ಸಾಮಿ ತಂಡವನ್ನು 'ಇಂಡಿಯನ್ ಡಾಗ್ಸ್' ಎಂದ ಕುವೈತ್ ಅಧಿಕಾರಿಗಳು
ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ...

Published On :
ಕುವೈತ್: ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ.
ಸಾಮಿ ತಮ್ಮ ಟ್ವೀಟ್ ನಲ್ಲಿ ನಾವು ನಿಮ್ಮ ನಗರಕ್ಕೆ ಬಂದಿದ್ದು ಪ್ರೀತಿಯಿಂದ ಮತ್ತು ಭಾರತೀಯ ಸಹೋದರರ ಆಲಿಂಗನಕ್ಕಾಗಿ. ಆದರೆ ನೀವು ಅದಕ್ಕೆ ಸಹಕರಿಸಲಿಲ್ಲ. ಕುವೈತ್ ವಲಸೆ ಅಧಿಕಾರಿಗಳು ಅನುಚಿತವಾಗಿ ನಡೆದುಕೊಂಡರು. ಯಾವುದೇ ಕಾರಣ ಇಲ್ಲದೆ ನಮ್ಮ ತಂಡವನ್ನು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾರೆ.
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸಿದರೂ ಏನು ಕ್ರಮಕೈಗೊಳ್ಳಲಿಲ್ಲ. ಕುವೈತ್ ನವರಿಗೆ ಎಷ್ಟು ಸೊಕ್ಕಿರಬೇಕು ಎಂದು ಸಾಮಿ ಟ್ವೀಟಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಪ್ರತಿಕ್ರಿಯಿಸಿ, ಈ ರೀತಿ ಆಗಬಾರದಿತ್ತು. ಅದಕ್ಕೆ ವಿಶಾದಿಸುತ್ತೇವೆ. ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೂಡಲೇ ಸಂಪರ್ಕಿಸಿ ಎಂದು ಟ್ವೀಟ್ ನಲ್ಲೇ ತಿಳಿಸಿದರು. ಈ ವಿಚಾರವಾಗಿ ಸುಷ್ಮಾ ಸ್ವರಾಜ್ ಅವರನ್ನು ಸಾಮಿ ಸಂಪರ್ಕಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರೇ ನಿಮ್ಮ ಕಾಳಜಿಗೆ ಧನ್ಯವಾದಗಳು. ಅವರನ್ನು ನಾನು ಸಂಪರ್ಕಿಸಿದೆ. ನಮ್ಮ ತಂಡಕ್ಕೆ ಅವರು ನೆರವಾಗಿದ್ದಾರೆ. ಇಂತಹವರು ನಮ್ಮ ವಿದೇಶಾಂಗ ಸಚಿವರಾಗಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇನೆ ಎಂದು ರಿಜಿಜು ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ ಸಾಮಿ.
Thank you for your ever so prompt reply. Will call you & give you details. Thank you very much.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


