ದೇಶ

ಆತ್ಮಹತ್ಯೆಗೆ ಪ್ರಚೋದನೆ, ರಿಪಬ್ಲಿಕ್ ಟಿವಿ ಆರ್ನಬ್‌ ಗೋಸ್ವಾಮಿ ವಿರುದ್ಧ ಎಫ್ಐಆರ್

ಒಳಾಂಗಣ ಅಲಂಕಾರ ಕಲಾವಿದರೊಬ್ಬರಿಗೆ ಆತ್ಮಹತ್ಯೆಗೆ ಪ್ರೇರಣೆ ನಿಡಿದ್ದರೆನ್ನುವ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ....

ಆತ್ಮಹತ್ಯೆಗೆ ಪ್ರಚೋದನೆ, ರಿಪಬ್ಲಿಕ್ ಟಿವಿ ಆರ್ನಬ್‌ ಗೋಸ್ವಾಮಿ ವಿರುದ್ಧ ಎಫ್ಐಆರ್
ಆರ್ನಾಬ್ ಗೋಸ್ವಾಮಿ
Published On :
ರಾಯಗಢ(ಮಹಾರಾಷ್ಟ್ರ): ಒಳಾಂಗಣ ಅಲಂಕಾರ ಕಲಾವಿದರೊಬ್ಬರಿಗೆ ಆತ್ಮಹತ್ಯೆಗೆ ಪ್ರೇರಣೆ ನಿಡಿದ್ದರೆನ್ನುವ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ ಹಾಗೂ ಆಡಳಿತ ನಿರ್ದೇಶಕ ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಾರಾಷ್ಟ್ರದ ರಾಯಗಢದಲ್ಲಿನ ಆಲಿಬಾಗ್‌ನ ಬಂಗಲೆಯಲ್ಲಿ ಶನಿವಾರ ಬೆಳಿಗ್ಗೆ ಒಳಾಂಗಣ ಅಲಂಕಾರ ಕಲಾವಿದರೊಬ್ಬ ಆತ್ಮಹತ್ಯೆಗೆ ಶರಣಗಿದ್ದರು. ಆಕೆಯ ಪತ್ನಿ ನಿಡಿದ್ದ ದೂರಿನ ಆಧಾರದಲ್ಲಿ ರಾಯಗಢ ಪೋಲೀಸರು ಆರ್ನಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಳಾಂಗಣ ಅಲಂಕಾರ ಕಲಾವಿದ ಅನ್ವಯ್‌ ನಾಯ್ಕ್‌ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೊಟ್ ನಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ  ಆರ್ನಬ್‌ ಗೋಸ್ವಾಮಿ, ಲೊಕಾಸ್ಟ್‌ಎಕ್ಸ್‌ನ ಫಿರೋಜ್‌ ಶೇಖ್‌ ಹಾಗು ಸ್ಮಾರ್ಟ್‌ ವರ್ಕ್ಸ್‌ನ ನಿತೇಶ್‌ ಸರ್ದಾ ಅವರ ಹೆಸರಿದೆ. "ನಾನುರಿಪಬ್ಲಿಕ್ ಟಿವಿ ಕಛೇರಿಯ ಒಳಾಂಗಣ ವಿನ್ಯಾಸ ನೆರವೇರಿಸಿದ್ದು ಅದಕ್ಕೆ ಇದುವರೆಗೆ ಹಣ ಪಾವತಿ ಆಗಿಲ್ಲ" ಎಂದು ಡೆತ್ ನೊಟ್ ನಲ್ಲಿ ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ರಿಪಬ್ಲಿಕ್ ಟಿವಿ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದೆ. ಇಂಟೀರಿಯಲ್ ಡೆಕಾರೇಟರ್ ಗೆ ಗುತ್ತಿಗೆ ಆಧಾರದಲ್ಲಿ ಎಷ್ಟು ಹಣ ಪಾವತಿಸಬೇಕಾಗಿತ್ತೋ ಅಷ್ಟೂ ಹಣ ಪಾವತಿಯಾಗಿದೆ. ಸಂಸ್ಥೆ ಯಾವ ಬಾಕಿ ಉಳಿಸಿಕೊಂಡಿಲ್ಲ’ ಎಂದು ಸಂಸ್ಥೆ ಸ್ಪಷ್ಟನೆ ಕೊಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.