ಕಾಫಿ-ಟೀ ತಯಾರಿಕೆಗೆ ರೈಲು ಶೌಚಾಲಯದ ನೀರು ಬಳಕೆ, ಪೂರೈಕೆದಾರನಿಗೆ 1 ಲಕ್ಷ ದಂಡ!
ರೈಲುಗಳಲ್ಲಿ ಕಾಫಿ-ಟೀ ತಯಾರಿಕೆಗೆ ರೈಲಿನ ಶೌಚಾಲಯo ನೀರನ್ನು ಬಳಕೆ ಮಾಡಿದ್ದ ಪೂರೈಕೆದಾರನಿಗೆ ರೈಲ್ವೇ ಇಲಾಖೆ ಗುರುವಾರ ಒಂದು ಲಕ್ಷ ರೂ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

Published On :
ಹೈದರಾಬಾದ್: ರೈಲುಗಳಲ್ಲಿ ಕಾಫಿ-ಟೀ ತಯಾರಿಕೆಗೆ ರೈಲಿನ ಶೌಚಾಲಯo ನೀರನ್ನು ಬಳಕೆ ಮಾಡಿದ್ದ ಪೂರೈಕೆದಾರನಿಗೆ ರೈಲ್ವೇ ಇಲಾಖೆ ಗುರುವಾರ ಒಂದು ಲಕ್ಷ ರೂ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಟೀ ಕಾಫಿಗೆ ರೈಲಿನ ಟಾಯ್‌ಲೆಟ್ ನೀರನ್ನು ಬಳಕ ಮಾಡಿದ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಕಂಡು ತೀವ್ರ ಜಿಗುಪ್ಸೆ ಪಟ್ಟು ಆಕ್ರೋಶಿತರಾಗಿದ್ದ ಪ್ರಯಾಣಿಕರು ರೈಲಿನಲ್ಲಿ ಶುದ್ಧ ಆಹಾರ ಪೂರೈಸುವ ರೈಲು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸಿದ್ದರು. ಪ್ರಯಾಣಿಕರ ಆಕ್ರೋಶ ಸ್ಫೋಟವಾಗುತ್ತಿದ್ದಂತೆಯೇ ಇದೀಗ ಎಚ್ಚೆತ್ತುಕೊಂಡಿರುವ ರೈಲ್ವೇ ಇಲಾಖೆ ಕಾಫಿ-ಟೀ ಪೂರೈಕೆದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ಕೂಡ ನೀಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ಚೆನ್ನೆ ಸೆಂಟ್ರಲ್ - ಹೈದರಾಬಾದ್ ಚಾರ್‌ಮಿನಾರ್ ಎಕ್ಸ್‌ಪ್ರೆಸ್ ರೈಲಿನ ಟಾಯ್‌ಲೆಟ್‌ಲ್ಲಿ ನೀಲಿ ಶರ್ಟ್‌ಧಾರಿ ವ್ಯಕ್ತಿ ಗಳು, ಕಾಫಿ ಗಾಗಿ ಕ್ಯಾನ್‌ಗಳಲ್ಲಿ ನೀರು ತುಂಬಿಸಿಕೊಂಡು ಶೌಚಾಲಯದ ಹೊರಗೆ ನಿಂತಿದ್ದ ಟೀ-ಕಾಫಿ ಪೂರೈಕೆದಾರನಿಗೆ ಕೊಡುತ್ತಿದ್ದ ದೃಶ್ಯವನ್ನು ರೈಲು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದರು. ಬಳಿಕ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಇದೇ ವಿಚಾರವಾಗಿ ಕಳೆದ ತಿಂಗಳಲ್ಲಷ್ಟೇ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ರೈಲುಗಳಲ್ಲಿ ಟೀ ಕಾಫಿ ಆಹಾರ ಪೂರೈಸುವವರಿಗೆ ಗುಣಮಟ್ಟದೊಂದಿಗೆ ಎಂದೂ ರಾಜಿ ಮಾಡಕೂಡದೆಂದು ಎಚ್ಚರಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hyderabadಹೈದರಾಬಾದ್Indian Railwayಭಾರತೀಯ ರೈಲ್ವೇcoffee vendorToilet Waterಕಾಫೀ-ಟೀ ಪೂರೈಕೆದಾರರುಶೌಚಾಲಯ ನೀರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


