ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ: ಜು.10ರವರೆಗೆ ಕಾರ್ತಿ ಚಿದಂಬರಂ ಬಂಧನವಿಲ್ಲ
2ಜಿ ಹಗರಣ ಸಂಬಂಧ ಏರ್ಸೆಲ್ ಮ್ಯಾಕ್ಸಿಸ್ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ........

Published On :
ನವದೆಹಲಿ: 2ಜಿ ಹಗರಣ ಸಂಬಂಧ ಏರ್ಸೆಲ್ ಮ್ಯಾಕ್ಸಿಸ್ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜುಲೈ 10ರ ತನಕ ಬಂಧನದಿಂದ ರಕ್ಷಣೆ ನಿಡಿರುವುದಾಗಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಕಾರ್ತಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತ ವಾದಕ್ಕೆ ಕಾಲಾವಕಾಶ ಕೋರಿದ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿತ್ತು. ಇದನ್ನು ಅನುಸರಿಸಿ ವಿಶೇಷ ನ್ಯಾಯಾಧೀಶರಾದ ಒ ಪಿ ಸೈನಿ ಕಾರ್ತಿ ಚಿದಂಬರಂ ಗೆ ಜುಲೈ 10ರವರೆಗೂ ಬಂಧನದಿಂದ ರಕ್ಷಣೆ ನಿಡುವುದಾಗಿ ಆದೇಶಿಸಿದರು.
ಜಾರಿ ನಿರ್ದೇಶನಾಲಯದ ಪರ ವಕೀಲ ನಿತೇಶ್ ರಾಣಾ ಇದೇ ಕೇಸಿನ ಸಂಬಂಧದ ಒಂದು ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮುಂದಿದೆ. ಹೀಗಾಗಿ ಈ ವಿಚಾರಣೆಯನ್ನು ಮುಂದೂಡಬೇಕಿದೆ ಎಂದು ಕೋರಿಕೆ ಸಲ್ಲಿಸಿದ್ದರು. ಜುಲೈ 2ರಂದು ತಾನು ಇಅರ ಸಂಬಂಧ ವಾದ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ವಾದವನ್ನು ಬೆಂಬಲಿಸಿದ್ದ ಸಿಬಿಐ ಪ್ರಕರಣದ ವಿಚಾರಣೆ ಮುಂದೂಡುವಂತೆ ತಾನೂ ಮನವಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Enforcement Directorateಜಾರಿ ನಿರ್ದೇಶನಾಲಯಕಾರ್ತಿ ಚಿದಂಬರಂAircel-Maxisಏರ್ಸೆಲ್-ಮ್ಯಾಕ್ಸಿಸ್Karti Chidambaramcase P Chidambaramಪ್ರಕರಣ ಪಿ.ಚಿದಂಬರಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


