ದೇಶ

ಸ್ಟರ್ಲೈಟ್‌ ಕಾಪರ್‌ ವಿರುದ್ಧದ ಪ್ರತಿಭಟನೆಗೆ ಕೈಜೋಡಿಸಿದ ಕಮಲ್ ಹಾಸನ್

ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಕರಗಿಸುವ ಸ್ಥಾವರ ವಿಸ್ತರಿಸುತ್ತಿರುವ ಸ್ಟರ್ಲೈಟ್‌ ಕಾಪರ್‌.....

ಸ್ಟರ್ಲೈಟ್‌ ಕಾಪರ್‌ ವಿರುದ್ಧದ ಪ್ರತಿಭಟನೆಗೆ ಕೈಜೋಡಿಸಿದ ಕಮಲ್ ಹಾಸನ್
ಕಮಲ್ ಹಾಸನ್
Published On :
ಟ್ಯುಟಿಕರಿನ್: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಕರಗಿಸುವ ಸ್ಥಾವರ ವಿಸ್ತರಿಸುತ್ತಿರುವ ಸ್ಟರ್ಲೈಟ್‌ ಕಾಪರ್‌ ಕಂಪನಿಯ ವಿರುದ್ಧ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಗೆ ಖ್ಯಾತ ತಮಿಳು ನಟ ಹಾಗೂ ಮಕ್ಕಳ್‌ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಕೈಜೋಡಿಸಿದ್ದಾರೆ.
ಇಂದು ತುಟಿಕೋರಿನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್ ಅವರು ಯಾವುದೇ ಕಾರಣಕ್ಕೂ ತಾಮ್ರ ಕರಗಿಸುವ ಸ್ಥಾವರ ವಿಸ್ತರಿಸಲು ಅವಕಾಶ ನೀಡಬಾರದು ಮತ್ತು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸ್ಥಳೀಯರಿಗೆ ಕರೆ ನೀಡಿದ್ದಾರೆ.
ಜನ ವಸತಿ ಪ್ರದೇಶದಲ್ಲಿ ಮತ್ತು ಕೃಷಿ ವಲಯದಲ್ಲಿ ಸ್ಥಾವರ ಸ್ಥಾಪಿಸುವ ಅಗತ್ಯ ಏನಿದೆ? ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ. ತಾಮ್ರ ಉತ್ಪಾದನೆಗಿಂತ ಜನರ ಜೀವನ ಮುಖ್ಯ ಎಂದು ಮಕ್ಕಳ್ ನೀಧಿ ಮೈಯಂ ಮುಖ್ಯಸ್ಥ ಹೇಳಿದ್ದಾರೆ.
ಇದೇ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ನಿಮ್ಮ ಪಕ್ಷ ಪ್ರತಿಭಟನೆ ನಡೆಸುತ್ತದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಕಮಲ್, ಈ ಸಂಬಂಧ ಏಪ್ರಿಲ್ 4ರಂದು ತಿರುಚಿರಾಪಳ್ಳಿಯಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.