ದೇಶ

ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವ್ಯಕ್ತಿ ಬರ್ಬರ ಹತ್ಯೆ: 3 ಬಂಧನ

ದಲಿತ ವ್ಯಕ್ತಿಯೊಬ್ಬ ಗ್ರಾಮದಲ್ಲಿ ಕುದುರೆ ಸವಾರಿ ಮಾಡಿದ ಕಾರಣಕ್ಕೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ ರಾಜ್ಯದ ಭನವಗರ ಜಿಲ್ಲೆಯಲ್ಲಿ ನಡೆದಿದೆ...

ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವ್ಯಕ್ತಿ ಬರ್ಬರ ಹತ್ಯೆ: 3 ಬಂಧನ
ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವ್ಯಕ್ತಿ ಬರ್ಬರ ಹತ್ಯೆ
Published On :
ಭವನಗರ; ದಲಿತ ವ್ಯಕ್ತಿಯೊಬ್ಬ ಗ್ರಾಮದಲ್ಲಿ ಕುದುರೆ ಸವಾರಿ ಮಾಡಿದ ಕಾರಣಕ್ಕೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ ರಾಜ್ಯದ ಭನವಗರ ಜಿಲ್ಲೆಯಲ್ಲಿ ನಡೆದಿದೆ. 
ಪ್ರದೀಪ್ ರಾತೋಡ್ (21) ಹತ್ಯೆಯಾದ ಯುವಕನಾಗಿದ್ದಾನೆ. ಗ್ರಾಮದಲ್ಲಿ ಈತ ಕುದುರೆ ಏರಿ ಸವಾರಿ ಮಾಡುತ್ತಿರುವುದನ್ನು ಕಂಡ ಕೆಲ ಊರಿನ ಗ್ರಾಮಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕುದುರೆ ಸವಾರಿ ಮಾಡದಂತೆ ಬೆದರಿಕೆ ಹಾಕಿದ್ದರು. ಇಷ್ಟಾದರೂ ಆತ ಕುದುರೆ ಮಾಡಿದ್ದನೆಂದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಬೆದರಿಕೆಗಳು ಬಂದ ಹಿನ್ನಲೆಯಲ್ಲಿ ಪ್ರದೀಪ್ ಕುದುರೆಯನ್ನು ಮಾರಾಟ ಮಾಡಲು ಮುಂದಾಗಿದ್ದ. ಈ ವೇಳೆ ಕುದುರೆಮಾರಾಟ ಮಾಡದಂತೆ ಆತನ ಮನವೊಲಿಸಲಾಗಿತ್ತು. ಶುಕ್ರವಾರ ತಡರಾತ್ರಿಯಾದರೂ ಆತ ಮನೆಗೆ ಬಂದಿರಲಿಲ್ಲ. ಹೀಗಾಗಿ ನಮಗೆ ಸಾಕಷ್ಟು ಭಯವಾಗಿತ್ತು. ನಂತರ, ಪ್ರದೀಪ್ ಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಈ ವೇಳೆ ನಮ್ಮ ಕೃಷಿ ಭೂಮಿ ಹತ್ತಿರದಲ್ಲಿರುವ ರಸ್ತೆಯಲ್ಲಿ ಪ್ರದೀಪ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿತ್ತು. ಪ್ರದೀಪ್ ಸತ್ತು ಬಿದ್ದಿದ್ದು ಕೆಲವೇ ದೂರದಲ್ಲಿ ಕುದುರೆಯನ್ನೂ ಕೂಡ ಸಾಯಿಸಲಾಗಿತ್ತು ಎಂದು ಪ್ರದೀಪ್ ತಂದೆ ಕಲುಭಾಯ್ ರಾಥೋಡ್ ಅವರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಗ್ರಾಮದ ಹತ್ತಿರದಲ್ಲಿದ್ದ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಮುಂದಿನ ತನಿಖೆಗಾಗಿ ಭವನಗರ ಅಪರಾಧ ವಿಭಾಗದ ಸಹಾಯವನ್ನು ಕೇಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಪ್ರದೀಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭವನಗರ ನಾಗರೀಕ ಆಸ್ಪತ್ರೆಯಲ್ಲಿ ಸ್ಥಳಾಂತಿಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.