ದೇಶ

ಮುಂಬೈ: ನೀರಿನ ಪೈಪ್ ಸ್ಫೋಟ, ಆಗಸಕ್ಕೆ ಚಿಮ್ಮಿದ ಬೊಲೆರೋ ಕಾರು; ವಿಡಿಯೋ ವೈರಲ್

ನೀರಿನ ಪೈಪ್ ಸ್ಱೋಟಗೊಂಡ ಪರಿಣಾಮ ಪೈಪ್ ಮೇಲಿದ್ದ ಕಾರು ಗಾಳಿಯಲ್ಲಿ ತೇಲಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ: ನೀರಿನ ಪೈಪ್ ಸ್ಫೋಟ, ಆಗಸಕ್ಕೆ ಚಿಮ್ಮಿದ ಬೊಲೆರೋ ಕಾರು; ವಿಡಿಯೋ ವೈರಲ್
ನೀರಿನ ಪೈಪ್ ಸ್ಫೋಟದ ಪರಿಣಾಮ ಆಗಸಕ್ಕೆ ಚಿಮ್ಮಿದ ಬೊಲೆರೋ ಕಾರು
Published On :
ಮುಂಬೈ: ನೀರಿನ ಪೈಪ್ ಸ್ಱೋಟಗೊಂಡ ಪರಿಣಾಮ ಪೈಪ್ ಮೇಲಿದ್ದ ಕಾರು ಗಾಳಿಯಲ್ಲಿ ತೇಲಿದ ಘಟನೆ ಮುಂಬೈನಲ್ಲಿ ನಡೆದಿದೆ.
ವಾಯುವ್ಯ ಮುಂಬೈನ ಬೊರಿವಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯರು ತಿಳಿಸಿರುವಂತೆ ನೀರಿನ ಪೈಪ್ ಒಡೆದಿತ್ತು. ಇದು ಸಾಮಾನ್ಯ ಸಂಗತಿ ಎಂದು ಎಲ್ಲರೂ ತಿಳಿದಿದ್ದೆವು. ಆದರೆ ನೋಡ ನೋಡುತ್ತಿದ್ದಂತೆಯೇ ನೀರಿನ ರಭಸಕ್ಕೆ ಪೈಪ್ ಸ್ಫೋಟಗೊಂಡು ಪೈಪ್ ಮೇಲಿದ್ದ ಮಹಿಂದ್ರಾ ಬೊಲೆರೋ ವಾಹನ ಗಾಳಿಯಲ್ಲಿ ಚಿಮ್ಮಿತು. ಸುಮಾರು 10 ಅಡಿಗಳ ಮೇಲಕ್ಕೆ ಹಾರಿದ ವಾಹನ ಬಳಿಕ ನೆಲಕ್ಕೆ ಬಿತ್ತು. ಅದೃಷ್ಟವಶಾತ್ ಆ ಪ್ರದೇಶದಲ್ಲಿ ಜನ ನಿಂತಿರಲಿಲ್ಲ. 
ಎರಡನೇ ಅಂತಸ್ತಿನವರೆಗೂ ಹಾರಿದ ನೀರು
ಇನ್ನು ನೀರಿನ ರಭಸ ಎಷ್ಟಿತ್ತು ಎಂದರೆ ಪೈಪ್ ನಿಂದ ಮೇಲಕ್ಕೆ ಚಿಮ್ಮಿದ ನೀರು ಕಟ್ಟಡದ ಎರಡನೇ ಮಹಡಿಯವರೆಗೂ ಚಿಮ್ಮುತ್ತಿತ್ತು. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಕೆಲಕಾಲ ಅಂತಕಕ್ಕೆ ಕಾರಣವಾಗಿತ್ತು. ಆದರೆ ಅಲ್ಲಿನ ಜನ ಮಾತ್ರ ಇದನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.