ದೇಶ

ಕೇರಳ: ಜಾತಿ, ಧರ್ಮವನ್ನು ಬಹಿರಂಗಪಡಿಸಲು ಒಪ್ಪದ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು!

2017-18 ನೇ ಸಾಲಿನ ಶಾಲಾ ಪ್ರವೇಶಕ್ಕೆ ಸಲ್ಲಿಕೆ ಮಾಡಲಾಗಿರುವ ದಾಖಲಾತಿಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಜಾತಿ, ಧರ್ಮವನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ.

ಕೇರಳ: ಜಾತಿ, ಧರ್ಮವನ್ನು ಬಹಿರಂಗಪಡಿಸಲು ಒಪ್ಪದ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು!
ಕೇರಳ: ಜಾತಿ, ಧರ್ಮವನ್ನು ಬಹಿರಂಗಪಡಿಸಲು ಒಪ್ಪದ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು!
Published On :
ಕೊಚ್ಚಿ: 2017-18 ನೇ ಸಾಲಿನ ಶಾಲಾ ಪ್ರವೇಶಕ್ಕೆ ಸಲ್ಲಿಕೆ ಮಾಡಲಾಗಿರುವ ದಾಖಲಾತಿಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಜಾತಿ, ಧರ್ಮವನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ. 
ಕೇರಳ ವಿಧಾನಸಭೆಯಲ್ಲಿ ಶಿಕ್ಷಣ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಜಾತಿ, ಧರ್ಮವನ್ನು ನಮೂದಿಸಲು ಇಚ್ಛಿಸಿಲ್ಲ ಎಂದು ಹೇಳಿದ್ದಾರೆ. ಕೇರಳದಲ್ಲಿನ ಹೊಸ ಪೀಳಿಗೆ ಜಾತಿ, ಧರ್ಮದ ಸಂಕೋಲೆಗಳಿಂದ ಹೊರಬರುವ ನಿಟ್ಟಿನಲ್ಲಿ ಮುಕ್ತ ಚಿಂತನೆಗಳಿಗೆ ಮುಂದಡಿ ಇಡುತ್ತಿದೆ ಎಂದು ಈ ಬೆಳವಣಿಯನ್ನು ವಿಶ್ಲೇಷಿಸಲಾಗುತ್ತಿದೆ. 
ಎಡಪಂಥೀಯ ಚಿಂತಕರೂ ಸಹ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಅತ್ಯಂತ ಸಂತೋಷ ನೀಡುವ ಸುದ್ದಿ ಎಂದು ಹೇಳಿದ್ದಾರೆ.  ಕೇರಳದಲ್ಲಿ ಮೂಲಭೂತವಾದಿ ಧೋರಣೆ ಹೆಚ್ಚಾಗುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿರುವ ಬೆನ್ನಲ್ಲೇ ಈ ರೀತಿಯ ಸುದ್ದಿ ಬಂದಿರುವುದು ಕೇರಳದ ಬಗ್ಗೆ ಭರವಸೆ ಮೂಡಿಸುತ್ತಿದೆ ಎಂದು ಅಲ್ಲಿನ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾವಾರು ಮಟ್ಟದಲ್ಲಿ ಎಷ್ಟು ವಿದ್ಯಾರ್ಥಿಗಳ ಪೋಷಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಬಹಿರಂಗಪಡಿಸುವಂತೆ ಕೋರಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.