ದೇಶ

ಕೇರಳ: ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲಿ ಮಹಿಳೆ ಒದ್ದಾಡುತ್ತಿದ್ದರೂ ನೆರವಿಗೆ ಬಾರದ ಜನ

ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲಿ ಮಹಿಳೆಯೊಬ್ಬರು ನರಳಾಡುತ್ತಿದ್ದರೂ, ಮಹಿಳೆಯ ರಕ್ಷಣೆಗೆ ಸಾರ್ವಜನಿಕರು ಮುಂದಾಗದ ಅಮಾನವೀಯ ಘಟನೆಯೊಂದು ಕೇರಳ ರಾಜ್ಯದ ಕಡಕಾವೋರ್ ಎಂಬಲ್ಲಿ ನಡೆದಿದೆ...

ಕೇರಳ: ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲಿ ಮಹಿಳೆ ಒದ್ದಾಡುತ್ತಿದ್ದರೂ ನೆರವಿಗೆ ಬಾರದ ಜನ
ಮಾನವೀಯತೆ ಮರೆತ ಕೇರಳ ಜನತೆ: ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲಿ ಮಹಿಳೆ ಒದ್ದಾಡುತ್ತಿದ್ದರೂ ನೆರವಿಗೆ ಬಾರದ ಜನ
Published On :
ತಿರುವನಂತಪುರ: ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲಿ ಮಹಿಳೆಯೊಬ್ಬರು ನರಳಾಡುತ್ತಿದ್ದರೂ, ಮಹಿಳೆಯ ರಕ್ಷಣೆಗೆ ಸಾರ್ವಜನಿಕರು ಮುಂದಾಗದ ಅಮಾನವೀಯ ಘಟನೆಯೊಂದು ಕೇರಳ ರಾಜ್ಯದ ಕಡಕಾವೋರ್ ಎಂಬಲ್ಲಿ ನಡೆದಿದೆ. 
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ವಾಹನವೊಂದು ಗುದ್ದಿ ಪರಾರಿಯಾಗಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಮಹಿಳೆ ನಡು ರಸ್ತೆಯಲ್ಲಿಯೇ ಬಿದ್ದು ಒದ್ದಾಡಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದ ಜನತೆ ಸಹಾಯಕ್ಕೆ ಬಾರದೆ ಅಲ್ಲಿಯೇ ಓಡಾಡುತ್ತಾ ನಿಂತಿದ್ದಾರೆ. ಇನ್ನು ರಸ್ತೆಯಲ್ಲಿ ಹಲವು ವಾಹನಗಳು ಓಡಾಡುತ್ತಿದ್ದರೂ, ಯಾವುದೇ ವಾಹನ ಚಾಲಕ ಕೂಡ ವಾಹನ ನಿಲ್ಲಿಸಿ ಸಹಾಯಕ್ಕೆ ಬಂದಿಲ್ಲ. 
ಬಳಿಕ ವ್ಯಕ್ತಿಯೊಬ್ಬ ಸಹಾಯಕ್ಕೆ ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಪೊಲೀಸ್ ವಾಹನವೊಂದು ಬಂದಿದೆ. ಬಳಿಕ ವಾಹನ ನಿಲ್ಲಿಸಿದ ಪೊಲೀಸರು ತಮ್ಮ ವಾಹನದಲ್ಲಿಯೇ ಮಹಿಳೆಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯ ವಿಡಿಯೋ ಸ್ಥಳೀಯ ಸಿಸಿಟಿವಿಯೊಂದರಲ್ಲಿ ದಾಖಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ಬಗ್ಗೆ ಯಾರೊಬ್ಬರೂ ಮಾಹಿತಿ ನೀಡಿರಲಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದೆವು. ಈ ವೇಳೆ ಜನರು ಗುಂಪುಗಟ್ಟಿರುವುದನ್ನು ನೋಡಿ ವಾಹನ ನಿಲ್ಲಿಸಿ ಸ್ಥಳಕ್ಕೆ ಹೋದೆವು. ಬಳಿಕ ಮಹಿಳೆಯನ್ನು ತಿರುವನಂತಪುರಂ ವೈದ್ಯಕೀ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ. 
ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.